ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರು ಕಾರು ತಡೆದಿದ್ದಕ್ಕೆ ಬಿಹಾರ ಮಿನಿಸ್ಟರ್ ರಂಪಾಟ- ಶಪಥ.!

ಪಾಟ್ನಾ: ಬಿಹಾರದ ಕಾರ್ಮಿಕ ಸಂಪನ್ಮೂಲ ಸಚಿವ ಜೀವೇಶ್ ಮಿಶ್ರಾ ಅವರು ತಮ್ಮ ಎಸ್‌ಯುವಿಯಲ್ಲಿ ಗುರುವಾರ ವಿಧಾನಸಭೆ ಆವರಣದೊಳಗೆ ಬಂದಿದ್ದರು. ಆದರೆ ಅದನ್ನು ಪೊಲೀಸರು ತಡೆದಿದ್ದರಿಂದ ಸಚಿವರು ಫುಲ್ ಗರಂ ಆಗಿ ರೇಗಾಡಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು. "ನೀವು ನನ್ನನ್ನು ಎಸ್‌ಪಿ, ಡಿಎಂಗಾಗಿ ನಿಲ್ಲಿಸುತ್ತೀರಿ. ನಾವು ಸರ್ಕಾರ, ನಮ್ಮೊಂದಿಗೆ ಒರಟಾಗಿ ನಡೆದುಕೊಳ್ಳುತ್ತೀರಾ" ಎಂದು ಜೀವೇಶ್ ಮಿಶ್ರಾ ಪ್ರಶ್ನಿಸಿದ್ದಾರೆ. ಬಳಿಕ ಮತ್ತೆ ಕಾರಿನಿಂದ ವಾಪಸ್‌ ಆದ ಸಚಿವರು, ಎಸ್‌ಪಿ, ಡಿಎಂ ಅವರು ಬರುತ್ತಿದ್ದರೆ ಮಂತ್ರಿಗಳ ಕಾರು ತಡೆದು ನಿಲ್ಲಿಸುತ್ತಾರೆ. ಇಲ್ಲಿ ನಿಂತಿರುವ ಅಧಿಕಾರಿಯನ್ನು ಅಮಾನತ್ತು ಮಾಡಬೇಕು. ಇತ ಅಮಾನತ್ತುಗೊಂಡ ಬಳಿಕವೇ ನಾನು ಸದಸಕ್ಕೆ ಕಾಲಿಡುತ್ತೇನೆ" ಎಂದು ಮಾಧ್ಯಮಗಳ ಎದುರು ಅಸಮಾಧಾನ ಹೊರ ಹಾಕಿದ್ದಾರೆ.

Edited By : Nagesh Gaonkar
PublicNext

PublicNext

02/12/2021 09:02 pm

Cinque Terre

69.09 K

Cinque Terre

2

ಸಂಬಂಧಿತ ಸುದ್ದಿ