ಬೆಂಗಳೂರು: ನೀವು ಸಾಲ ಮಾಡಿ, ಕಳ್ಳತನ ಮಾಡಿ. ಆದರೆ ಮೂಲಭೂತ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠವು ತರಾಟೆ ತೆಗೆದುಕೊಂಡಿದೆ.
ದಾಸರಹಳ್ಳಿ ವಿಭಾಗದಲ್ಲಿ ರಸ್ತೆ ದುಸ್ಥಿತಿ ಹಿನ್ನೆಲೆ, ಇಲ್ಲಿ ನಿಜಕ್ಕೂ ರಸ್ತೆಗಳು ಅಸ್ತಿತ್ವದಲ್ಲಿವೆಯೇ ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠವು ಪ್ರಶ್ನೆ ಮಾಡಿದೆ. ಈ ವೇಳೆ ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ, 'ಮಳೆ ಮುಗಿದ ನಂತರ ರಸ್ತೆ ಕಾಮಗಾರಿ ನಡೆಸಲಾಗುವುದು. ಅನುದಾನ ಲಭ್ಯವಾದರೆ ಶೀಘ್ರ ಕಾಮಗಾರಿ ನಡೆಸುವುದು' ಎಂದು ಹೈಕೋರ್ಟ್ಗೆ ಹೇಳಿಕೆ ನೀಡಿದ್ದಾರೆ. ಇದರಿಂದ ಕೋರ್ಟ್, "ನೀವು ಸಾಲ ಮಾಡಿ, ಕಳ್ಳತನ ಮಾಡಿ. ಆದರೆ, ಮೂಲಭೂತ ಸೌಕರ್ಯ ಕಲ್ಪಿಸುವುದು ನಿಮ್ಮ ಕರ್ತವ್ಯ. ಮಳೆಯ ನಂತರ ಬೆಂಗಳೂರಿನ ರಸ್ತೆಗಳು ಇನ್ನೂ ಹಾಳಾಗಿವೆ ಎಂದು ಸಿಜೆ ರಿತು ರಾಜ್ ಅವಸ್ತಿ ನೇತೃತ್ವದ ಪೀಠ ಅಸಮಾಧಾನ ಹೊರಹಾಕಿದೆ.
ಈ ಸಂಬಂಧ ಜನವರಿ ತಿಂಗಳೊಳಗೆ ಕಾಮಗಾರಿ ಪ್ರಗತಿಯ ವರದಿ ನೀಡಿ ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ಮಾಡಿದೆ. ಈ ಪ್ರಕರಣ ಬಗ್ಗೆ ಅಶ್ವತ್ಥ್ ನಾರಾಯಣ ಚೌಧರಿ ಪಿಐಎಲ್ ಸಲ್ಲಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ.
PublicNext
25/10/2021 07:01 pm