ಮಂಗಳೂರು: ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕೇಸ್ ಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ವಿದ್ಯುತ್ ವ್ಯತ್ಯಯ ಆದಾಗ ವ್ಯಕ್ತಿಯೊಬ್ಬರು ಅಧಿಕಾರಿಗೆ ಕರೆ ಮಾಡಿ ನಿಂದಿಸಿದ್ದಾರೆ. ಆ ವ್ಯಕ್ತಿ ನಾನು ಸಚಿವನಾಗಿದ್ದಾಗ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದರು. ಇದೇ ಕಾರಣಕ್ಕಾಗಿ ಅಧಿಕಾರಿಗಳು ಆತನ ಮೇಲೆ ದೂರು ನೀಡಿದ್ದರು. ಈ ಕೇಸಿನ ವಿಚಾರಚಾಗಿ ಸಾಕ್ಷಿ ಹೇಳಲು ಬಂದಿದ್ದೇನೆ ಎಂದರು.
ವಿದ್ಯುತ್ ಸಮಸ್ಯೆಗಳನ್ನು ನಾನು ಸಚಿವನಾಗಿದ್ದಾಗ ಬಗೆಹರಿಸುವ ಪ್ರಯತ್ನ ಮಾಡಿದ್ದೆ. ಈಗಿನವರು ಕೂಡ ಬಗೆಹರಿಸುತ್ತಾರೆಂಬ ಭರವಸೆ ಇದೆ ಎಂದು ಡಿಕೆಶಿ ಹೇಳಿದರು.
PublicNext
05/10/2021 05:34 pm