ಬೆಂಗಳೂರು: ರಾಜ್ಯದ ಹಲವೆಡೆ ಕಾನೂನು ಬಾಹಿರವಾಗಿ ಜೂಜಾಟ ನಡೆಯುತ್ತಿವೆ. ಜೂಜಾಟದ ವ್ಯವಸ್ಥೆಯನ್ನು ಸಂಘಟನೆಯಾಗಿ ಕೆಲ ಸ್ಥಳಗಳಲ್ಲಿ ಸೇರುತ್ತಿದ್ದಾರೆ. ಈ ಎಲ್ಲವನ್ನು ತಡೆಯಬೇಕು ಎಂದ ಪ್ರತಿಪಕ್ಷಗಳಿಗೆ ವಿಧಾನಸಭೆಯಲ್ಲಿ ಉತ್ತರಿಸಿದಂತ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಗ್ಯಾಂಬ್ಲಿಂಗ್ ಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಗುರಿಯಾಗಿದೆ ಎಂಬುದಾಗಿ ಘೋಷಿಸಿದರು.
ಇಂದು ವಿಧಾನಸಭೆಯಲ್ಲಿ ಶಾಸಕ ರಂಗನಾಥ್ ಅವರು ಪ್ರಸ್ತಾಪಿಸಿದಂತ ವಿಷಯ ಕುರಿತಂತೆ ಪ್ರತಿಕ್ರಿಯಿಸಿದಂತ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು, ಜೂಜಾಟವು ಈಗ ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇದನ್ನು ಶಾಶ್ವತವಾಗಿ ನಿಲ್ಲಿಸಲು ವಿಶೇಷ ಕ್ರಮ ಕೈಗೊಳ್ಳುವ ಯೋಜನೆಯಲ್ಲಿದ್ದೇವೆ. ಈಗಾಗಲೇ ಪೊಲೀಸರಿಗೆ ಸೂಚಿಸಲಾಗಿದ್ದು, ಜೂಜಾಟದ ಮೇಲೆ ಕಣ್ಣಿಡಲು ಸೂಚಿಸಲಾಗಿದೆ ಎಂದರು.
PublicNext
21/09/2021 06:13 pm