ಬೆಂಗಳೂರು: ರೌಡಿಶೀಟರ್, ಕೊಲೆ ಆರೋಪಿಗಳ ಬರ್ತ್ ಡೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜ್ಯದ ಕೆಲ ಪೊಲೀಸರು ಕುಖ್ಯಾತಿಗೆ ಗುರಿಯಾಗಿದ್ದರು. ಈ ಮಧ್ಯೆ ಕೆಲ ಪೊಲೀಸ್ ಅಧಿಕಾರಿಗಳು ಶಾಸಕರೊಬ್ಬರಿಗೆ ಹಾಗೂ ಅವರ ಪತ್ನಿಗೆ ಹೂ ಮಳೆ ಸುರಿದು ಭಾರಿ ಚರ್ಚೆಗೆ ಗುರಿಯಾಗಿದ್ದಾರೆ. ಇದರಿಂದಾಗಿ ಕರ್ನಾಟಕ ಪೊಲೀಸರು ಶಾಸಕ ಕೂಲಿಗಳದ್ರಾ ಎನ್ನುವ ಪ್ರಶ್ನೆ ಎದ್ದಿದೆ.
ಹೌದು. ಬೆಳಗಾವಿ ಜಿಲ್ಲೆಯ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಹುಟ್ಟುಹಬ್ಬದ ಹಿನ್ನೆಲೆ ಪೊಲೀಸರು ದಂಪತಿಗೆ ಹೂಮಳೆ ಸುರಿಸಿ ಮಹಾರಾಜನಂತೆ ಮೆರೆಸಿದ್ದಾರೆ.
ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ ಅವರು ಇಂದು ಬರ್ತ್ ಡೇ ಸಂಭ್ರದಲ್ಲಿದ್ದಾರೆ. ಈ ಹಿನ್ನೆಲೆ ಅವರ ನಿವಾಸಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು ದಂಪತಿಯನ್ನ ಕೂರಿಸಿ ಹೂಮಳೆಗರೆದಿದ್ದಾರೆ. ಬೈಲಹೊಂಗಲ ಡಿಎಸ್ಪಿ, ಸಿಪಿಐ, ನೇಸರಗಿ ಪಿ.ಎಸ್.ಐ ಹಾಗೂ ಎ.ಎಸ್.ಐ ಭಾಗಿಯಾಗಿದ್ದಾರೆ. ಶಾಸಕ ಮಹಾಂತೇಶ ದೊಡ್ಡಗೌರ್ ಅವರ ಅಂಧಾ ದರ್ಭಾರ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪೋಲಿಸ್ ಅಧಿಕಾರಿಗಳ ನಡೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
PublicNext
04/09/2021 02:57 pm