ದಾವಣಗೆರೆ: ನಿಯಮ ಉಲ್ಲಂಘಿಸಿ ಸ್ಪೋಟಕ ಬಳಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಇದಕ್ಕಾಗಿ ಕೇಂದ್ರ ಸರ್ಕಾರದ ಒಂದು ಎಕ್ಸಪ್ಲೋಸಿವ್ ಆಕ್ಟ್ ಇದೆ. ಕೆಲವರು ಅದನ್ನ ಉಲ್ಲಂಘನೆ ಮಾಡುತ್ತಿದ್ದು, ಹೀಗಾಗಿ ಆ ಆಕ್ಟ್ ನ ಬಳಕೆ ಮಾಡಿಕೊಳ್ಳಲು ಒಂದು ಸುತ್ತೋಲೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಳಿಕ, ಲೈಸೆನ್ಸ್ ಮತ್ತು ಲೈಸೆನ್ಸ್ ಇಲ್ಲದ ಕಡೆಗಳಲ್ಲಿ ಹೆಚ್ಚಿನ ಸ್ಫೋಟಕ ಬಳಕೆಯಾಗುತ್ತಿದೆ. ಸ್ಫೋಟಕಗಳ ಬಗ್ಗೆ ಪರೀಶೀಲನೆ ಮಾಡಿ ಎಲ್ಲಿ ಎಷ್ಟಿರಬೇಕೋ ಅಷ್ಟಷ್ಟೇ ಇರಬೇಕು. ಹೆಚ್ಚಿನದಾಗಿದ್ದರೆ ಅದನ್ನ ನಿಗ್ರಹಿಸಲು ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಅನಾಹುತ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.
ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಕೇಸ್ ಗಳನ್ನ ಎನ್ ಐ ಎಗೆ ಸರ್ಕಾರ ನೀಡಿದೆ. ಇದೀಗ ಅವರು ಗಂಭೀರವಾದ ಚಾರ್ಜ್ ಶೀಟ್ ಫೈಲ್ ಮಾಡಿದ್ದಾರೆ. ಘಟನೆ ಬಗ್ಗೆ ನಾವು ಏನು ಹೇಳಿದ್ದೇವೋ ಅವರು ಅದೇ ರೀತಿ ರಿಪೋರ್ಟ್ ಹಾಕಿದ್ದಾರೆ. ಕೋರ್ಟ್ ನಲ್ಲಿ ಈ ಬಗ್ಗೆ ಎಲ್ಲ ತೀರ್ಮಾನವಾಗಬೇಕು ಎಂದರು.
PublicNext
26/02/2021 03:19 pm