ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಾಂತರ ಆದವರಿಗೆ ಸರ್ಕಾರದ ಸೌಲಭ್ಯ ಇಲ್ಲ: ಆರಗ ಜ್ಞಾನೇಂದ್ರ

ಬೆಳಗಾವಿ: 'ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣಾ ವಿಧೇಯಕ 2021' ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಈ ಬಗ್ಗೆ ಸುವರ್ಣ ಸೌಧದಲ್ಲಿ ನಡೆದ ಚರ್ಚೆ ವೇಳೆ ಕಾಯ್ದೆಯು ಏನನ್ನು ಹೇಳುತ್ತದೆ ಎಂಬ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಕೆಲವು ಸ್ಪಷ್ಟನೆಗಳನ್ನು ನೀಡಿದ್ದಾರೆ.

ಬೇರೆ ಧರ್ಮ ಸ್ವೀಕರಿಸುವವರಿಗೆ ಅವರ ಮೂಲ ಧರ್ಮದಲ್ಲಿ ಇದ್ದ ಹಕ್ಕು ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂದು ಗೃಹ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ದಲಿತ ವ್ಯಕ್ತಿಯೋರ್ವ ಮತಾಂತರವಾದರೆ ಪರಿಶಿಷ್ಟ ಜಾತಿಗಳಿಗೆ ಸರ್ಕಾರದಿಂದ ಸಿಗುತ್ತಿದ್ದ ಎಲ್ಲ ರೀತಿಯ ಸೌಲಭ್ಯಗಳನ್ನು ಹಿಂಪಡೆಯಲಾಗುತ್ತದೆ‌. ಶಿಕ್ಷಣ, ಉದ್ಯೋಗ, ಹಾಗೂ ಬಡ್ತಿಯಲ್ಲಿ ನೀಡಲಾಗುವ ಮೀಸಲಾತಿ ಕೂಡ ಮತಾಂತರ ಹೊಂದಿದವರಿಗೆ ಸಿಗೋದಿಲ್ಲ. ಮೂಲ ಮತದ ಹಕ್ಕು, ಕೂಡ ಅವರಿಗೆ ಇರೋದಿಲ್ಲ ಎಂದು ಆರಗ ಜ್ಞಾನೇಂದ್ರ ಸದನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನು ಒತ್ತಾಯ ಅಥವಾ ಆಮಿಷದ ಮತಾಂತರ ಮಾಡಿದಲ್ಲಿ ಅಂತವರಿಗೆ 3ರಿಂದ 10ವರ್ಷಗಳ ಜೈಲು ಹಾಗೂ 10ಲಕ್ಷ ದಂಡ. ಮತಾಂತರದಿಂದ ಬಲಿಯಾದರೆ ಆಪಾದಿತರಿಂದ ಗರಿಷ್ಠ 5 ಲಕ್ಷಗಳವರೆಗೆ ಪರಿಹಾರ ಹಾಗೂ ನ್ಯಾಯಾಲಯ ನೀಡುವ ಶಿಕ್ಷೆಗೆ ಗುರಿಯಾಗಬೇಕು ಎಂದು ಆರಗ ಜ್ಞಾನೇಂದ್ರ ವಿವರಿಸಿದ್ದಾರೆ.

Edited By : Nagaraj Tulugeri
PublicNext

PublicNext

23/12/2021 02:31 pm

Cinque Terre

61.87 K

Cinque Terre

19

ಸಂಬಂಧಿತ ಸುದ್ದಿ