ಕೀವ್: ಉಕ್ರೇನ್ ಮೇಲೆ ನಡೆಸಿದ ದಾಳಿ ಪರಿಣಾಮ ರಷ್ಯಾ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಮುಂದಿನ 25 ವರ್ಷಗಳಲ್ಲಿ ರಷ್ಯಾ ತಾನು ಸಾಧಿಸಿದ ಎಲ್ಲವನ್ನೂ ಕಳೆದುಕೊಳ್ಳುತ್ತದೆ. ಮುಂದೆ ನೋವಿನ ಪತನ ಆಗಲಿದೆ. ಅದನ್ನು ರಷ್ಯಾ ಅನುಭವಿಸಲಿದೆ. 90 ದಶಕದ ದುರಂತಕ್ಕೆ ರಷ್ಯಾ ಮರಳಲಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ಸದ್ಯ ಉಕ್ರೇನ್‌ನಲ್ಲಿ ಇರುವ ತಮ್ಮ ಸೈನ್ಯವನ್ನು ವಾಪಸ್ ಕರೆಸಿಕೊಳ್ಳಲಾಗದು. ಹಾಗೂ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದಾಗಿ ರಷ್ಯಾ ಹೇಳಿದೆ.
PublicNext
19/03/2022 08:10 am