ಮಾಸ್ಕೋ: ಇಡೀ ಉಕ್ರೇನ್ ದೇಶವನ್ನೇ ರಣಾಂಗಣ ಮಾಡಿರುವ ರಷ್ಯಾ ಸೇನೆ ಕೀವ್, ಮರಿಯುಪೋಲ್, ಹಾರ್ಕಿವ್ ಮತ್ತು ಸುಮಿ ನಗರಗಳಲ್ಲಿ ಸದ್ಯ ಕದನ ವಿರಾಮ ಘೋಷಿಸಿದೆ. ಈ ವಿರಾಮವು ಮಾಸ್ಕೋ ಸಮಯ ಬೆಳಗ್ಗೆ 10 ಗಂಟೆಯಿಂದ ಜಾರಿಗೆ ಬಂದಿದೆ.
ಕಳೆದ ಶನಿವಾರ, ಮರಿಯುಪೋಲ್ ಮತ್ತು ವೊಲ್ನೋವಾಖಾ ನಗರಗಳಿಂದ ನಾಗರಿಕರು ನಿರ್ಗಮಿಸಲು ರಷ್ಯಾ 5 ಗಂಟೆಗಳ ಕದನ ವಿರಾಮವನ್ನು ಘೋಷಿಸಿತ್ತು. ಕದನ ವಿರಾಮವು ಉಕ್ರೇನ್‌ನ ಈ ನಾಲ್ಕು ನಗರಗಳಿಂದ ನಾಗರಿಕರನ್ನು ಸ್ಥಳಾಂತರಿಸಲು ಕದನ ವಿರಾಮ ಘೋಷಿಸಲಾಗಿದೆ. ರಷ್ಯಾದ ಸೇನೆಯು ಉಕ್ರೇನ್‌ನಲ್ಲಿ ಹಲವು ಮಾನವೀಯ ಕಾರಿಡಾರ್‌ಗಳನ್ನು ತೆರೆಯುವುದಾಗಿ ಘೋಷಿಸಿದೆ. ಆ ಬಳಿಕವೂ ರಷ್ಯಾ ಶೆಲ್ ದಾಳಿ ನಡೆಸಿದ್ದರಿಂದ, ನಾಗರಿಕರ ಸ್ಥಳಾಂತರ ವಿಳಂಬವಾಯಿತು ಎಂದು ಉಕ್ರೇನ್ ಆರೋಪಿಸಿತ್ತು. ಉಕ್ರೇನ್ ನಗರಗಳಾದ ಮರಿಯುಪೋಲ್ ಮತ್ತು ವೊಲ್ನೋವಾಖಾದಿಂದ ನಾಗರಿಕರನ್ನು ಸ್ಥಳಾಂತರಿಸಲು ಮಾನವೀಯ ಕಾರಿಡಾರ್‌ಗಳನ್ನು ಪುನಃ ತೆರೆಯಲಾಗುವುದು ಎಂದು ರಷ್ಯಾ ಭಾನುವಾರ ಘೋಷಿಸಿತ್ತು.
PublicNext
07/03/2022 07:27 pm