ನವದೆಹಲಿ: ತಾಲಿಬಾನ್ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಿಂದ 168 ಜನ ಐಎಎಫ್‌ನಿಂದ ಸ್ಥಳಾಂತರಿಸಲ್ಪಟ್ಟಿದ್ದಾರೆ. ಇದರಲ್ಲಿ ಅಫ್ಘಾನ್ ನ ಸೆನೆಟರ್ ಕೂಡ ಒಬ್ಬರು.
ಸೆನೆಟರ್ ನರೇಂದರ್ ಸಿಂಗ್ ಖಾಲ್ಸಾ ಅವರು ಭಾನುವಾರ ನವದೆಹಲಿಗೆ ಮಾಧ್ಯಮಗಳ ಮುಂದೆ ಬಂದಿಳಿದಾಗ ಕಣ್ಣೀರಿಟ್ಟಿದ್ದಾರೆ. ಕಾಬೂಲ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಕೇಳಿದಾಗ, ಸೆನೆಟರ್ ನರೇಂದರ್ ಸಿಂಗ್ ಖಾಲ್ಸಾ ಕಣ್ಣೀರು ಹಾಕುತ್ತಾ,”ನನಗೆ ಅಳು ಬರುತ್ತಿದೆ .ಕಳೆದ 20 ವರ್ಷಗಳಲ್ಲಿ ನಿರ್ಮಿಸಿದ ಎಲ್ಲವೂ ಈಗ ಮುಗಿದಿದೆ. ಈಗ ಶೂನ್ಯವಾಗಿದೆ” ಎಂದು ಅವರು ದೆಹಲಿಯ ಸಮೀಪದ ಹಿಂಡನ್ ವಾಯುನೆಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
PublicNext
22/08/2021 01:59 pm