ಕಾಬೂಲ್:ಇಡೀ ಅಪ್ಘಾನಿಸ್ತಾನ ಈಗ ತಾಲಿಬಾನಿ ಉಗ್ರರ ವಶದಲ್ಲಿದೆ. ಅವರದ್ದೇ ಸರ್ಕಾರವೂ ರಚನೆಯಾಗಿದೆ. ತಾಲಿಬಾನಿ ದಾಳಿ ಭೀತಿಯಿಂದ ಅಲ್ಲಿನ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಪಲಾಯನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್, ಅಧ್ಯಕ್ಷರು ಹೋದರೇನಾಯ್ತು ಉಪಾಧ್ಯಕ್ಷನಾದ ನಾನು ಇನ್ನೂ ಇಲ್ಲಿ ಇದ್ದೇನೆ ಎಂದಿದ್ದಾರೆ.
ತಾಲಿಬಾಲಿಗಳು ರಾಜಧಾನಿ ಕಾಬೂಲ್ ಸೇರಿದಂತೆ ಬಹುತೇಕ ಅಫ್ಘಾನಿಸ್ತಾನವನ್ನೇ ವಶಕ್ಕೆ ಪಡೆದುಕೊಂಡಿದ್ದು, ಮುಖ್ಯವಾಗಿ ಕಾಬೂಲ್‌ನಿಂದ ಅಲ್ಲಿನ ಅಧ್ಯಕ್ಷ ಅಶ್ರಫ್ ಘನಿ ಸೇರಿದಂತೆ ಬಹುತೇಕ ನಾಯಕರು ದೇಶ ತೊರೆದು ಪಲಾಯನಗೈದಿದ್ದಾರೆ. ಅಶ್ರಫ್ ಘನಿ ದೇಶವನ್ನೇ ತೊರೆದಿದ್ದಾರೆ. ಇದೆಲ್ಲದರ ಬೆನ್ನಲ್ಲೇ ತಾಲಿಬಾನಿಗಳು ಸರ್ಕಾರ ರಚಿಸಲು ಮುಂದಾಗಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಆಫ್ಘನ್ ಉಪಾಧ್ಯಕ್ಷ ಅಮೃಲ್ಲಾಹ್ ಸಲೇಹ್ ಅವರು ತಾಲಿಬಾನ್ ಸರ್ಕಾರ ರಚನೆ ಸಾಧ್ಯವಿಲ್ಲ.. ದೇಶದ ಸಂವಿಧಾನದ ಪ್ರಕಾರ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷರಿಗೆ ಮಾತ್ರ ಆ ಹಕ್ಕಿರುತ್ತದೆ ಎಂದು ಹೇಳಿದ್ದಾರೆ.
PublicNext
18/08/2021 08:07 am