ಬೆಂಗಳೂರು: ಜೂನ್ 22 ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎರಡು ದಿನಗಳ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ದೆಹಲಿಗೆ ಹಿಂದಿರುಗಿದ್ದಾರೆ. ಮೈಸೂರಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯಂತೂ ಇಡೀ ಜಗತ್ತಿನ ಗಮನ ಸೆಳೆದಿದೆ.
ಆದರೆ ಯೋಗದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಮಂಡಿ ನೋವಿನ ಕಾರಣಕ್ಕಾಗಿ ಕೆಳಗಡೆ ಕುಳಿತುಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತಿದ್ದದ್ದ ದೃಶ್ಯವನ್ನು ಕೆಲವರು ಕಾಮಿಡಿ ಸರಕಾಗಿ ಬಳಸಿ ಅದನ್ನು full Troll ಮಾಡಿ ಮಜಾ ತೆಗೆದುಕೊಳ್ಳುತ್ತಿದ್ದಾರೆ.
ಇದು ಖಂಡಿತವಾಗಿಯೂ ಒಳ್ಳೆಯ ಸಂಸ್ಕೃತಿಯಲ್ಲಾ. ವೈಯಕ್ತಿಕವಾದ ದೈಹಿಕ ನೋವುಗಳಿಗೆ ಯಾರೂ ಅತೀತರಲ್ಲ.. ಸಿಎಂ ಬೊಮ್ಮಾಯಿಯವರು ಮಂಡಿನೋವಿನಿಂದ ಬಹಳ ಹಿಂದಿನಿಂದಲೂ ಬಳಲುತ್ತಿದ್ದಾರೆ. ಆ ನೋವಿನ ನಡುವೆಯೂ ಇಡೀ ರಾಜ್ಯವನ್ನು ಕಾಲಿಗೆ ಚಕ್ರಕಟ್ಟಿಕೊಂಡ ಹಾಗೆ ಸುತ್ತಿ ಬಂದಿದ್ದಾರೆ.
ಮಳೆಬಂದು ತತ್ತರಿಸಿದ್ದ ಇಡೀ ಬೆಂಗಳೂರನ್ನು ರೌಂಡ್ ಹಾಕಿ ಜನರಿಗೆ ಸಾಂತ್ವನ ಹೇಳಿದ್ದಾರೆ. ಅದೇ ನೋವಲ್ಲೇ ದಾವೋಸ್ ಗೂ ಹೋಗಿ ಶೃಂಗಸಭೆಯಲ್ಲಿ ಪಾಲ್ಗೊಂಡು ಬಂದಿದ್ದಾರೆ.. ಇಂತದರಲ್ಲಿ ಯೋಗಾಸನ ಮಾಡುವಾಗ ಅವರು ನೋವಿನಿಂದ ಬಳಲಿರುವುದನ್ನೇ ಹೈಲೈಟ್ ಮಾಡಿ ಅದನ್ನು ಟ್ರೋಲ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಇದೀಗ ಚರ್ಚೆಯಲ್ಲಿರುವ ವಿಚಾರ..
ಮಂಡಿನೋವು ಕಾಮಿಡಿ ಸರಕಲ್ಲ...ನಾಡದೊರೆ ಅಪಹಾಸ್ಯ ತರವಲ್ಲಾ... ಅನ್ನುವುದು Public Next ನ ಆಶಯ..
PublicNext
22/06/2022 08:14 pm