ಚೆನ್ನೈ: ತಮಿಳುನಾಡು ಸರಕಾರವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದೆ.
ವಿಜಯದಶಮಿ ಅಂಗವಾಗಿ ಅಕ್ಟೋಬರ್ 2ರಂದು ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಯೋಜಿಸಿತ್ತು. ಇದೇ ದಿನ ವಿಡುದಲೈ ಚಿರುತೈಗಳ್ ಕಟ್ಟಿ ಅವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇವೆರಡಕ್ಕೂ ತಮಿಳು ನಾಡು ಸರಕಾರ ನಿರಾಕರಿಸಿದೆ.
ಅಂದು ಗಾಂಧಿ ಜಯಂತಿ ಇರುವ ಕಾರಣ, ಪಥಸಂಚಲನಕ್ಕೆ ಅವಕಾಶ ನೀಡಿದರೆ ಇತರ ಸಂಘಟನೆಗಳಿಂದ ಆಕ್ಷೇಪ ಬಂದು ಗಲಭೆಗಳು ಉಂಟಾಗಬಹುದು. ಕಾನೂನು-ಸುವ್ಯವಸ್ಥೆಯ ತೊಡಕುಗಳು ಪಥಸಂಚಲನಕ್ಕೆ ಎದುರಾಗಬಹುದು ಈ ಕಾರಣಕ್ಕೆ ಪಥಸಂಚನ ಹಿಂತೆಗೆದುಕೊಳ್ಳುವಂತೆ ತಮಿಳು ನಾಡು ಸರಕಾರ ಸೂಚಿಸಿದೆ ಎನ್ನಲಾಗಿದೆ.
PublicNext
29/09/2022 11:10 pm