ಬೆಂಗಳೂರು- ಹಿಂದೂ ಕಾರ್ಯಕರ್ತರಿಗೂ ಇನ್ನೂ ಮುಂದೆ ಮೀಸಲಾತಿ ಕೊಡಬೇಕು ಎಂದು ಪ್ರೆಸ್‌ಕ್ಲಬ್‌ನಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಹಿಂದೂಗಳ ಪರ ಹೋರಾಟ ಮಾಡಲು ಹಿಂದೂತ್ವ ಉಳಿಸಲುಬೇಕು.ಇದುವರೆಗೂ ಗೋ ಹತ್ಯೆ ನಿಷೇಧ ಮಾಡಲಾಗಿದೆ ಆದ್ರೂ ಇನ್ನೂ ನಿಂತಿಲ್ಲ. ಎಲ್ಲಾ ಕಡೆಯಲ್ಲೂ ಈಗಲೂ ಗೋ ಹತ್ಯೆ ನಡೆಯುತ್ತಿದೆ. ನಮ್ಮ ಹಿಂದೂ ಕಾರ್ಯಕರ್ತರಿಗೆ ಅವಕಾಶ ನೀಡಿದ್ರೆ. ಇಂತಹ ಹೋರಾಟ ಮಾಡಲುಬೇಕಾಗುತ್ತೆ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಬಿಜೆಪಿ ಪಕ್ಷನ್ನು ನಾವೇ ಬೆಳೆಸಿರುವ ಪಕ್ಷ .ಇದು ನಮ್ಮದೇ ಪಕ್ಷ ಬಿಜೆಪಿ. ನೂರಕ್ಕೆ ನೂರರಷ್ಟು ಪಕ್ಷವನ್ನು ತಿದ್ದಿ ತೀಡುತ್ತೇವೆ. ನಾವು ಕುಡುಕ ಗಂಡನನ್ನ ಕಟ್ಟಿಕೊಂಡಿದ್ದೇವೆ . ಹಾಗಾಗಿ ಅದನ್ನು ಕಳೆದುಕೊಳ್ಳಲು ಆಗುತ್ತಿಲ್ಲ, ಇತ್ತ ಡೈವರ್ಸ್ ಕೊಡಲು ಆಗುತ್ತಿಲ್ಲ. ನಮಗೆ ೨೫ ಸೀಟು ಕೊಡಿ ನಾವು ಮಾಡಿ ತೋರಿಸುತ್ತೇವೆ. ನಮ್ಮಗೆ ಅಧಿಕಾರ ಕೊಡಿ ಮುಂದೆ ನೀವೆ ನೋಡಿ .ಈ ಸರ್ಕಾರ ಈಗ ಕುಸಿದು ಬೀಳುವ ಹಂತದಲ್ಲಿದೆ ಎಂದು ಪ್ರಮೋದ್ ಮುತಾಲಿಕ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
PublicNext
25/08/2022 04:43 pm