ಅಥಣಿ: ಈ ಮೊದಲು ಕಾಂಗ್ರೆಸ್ ನಿಂದ ಪಕ್ಷಾಂತರವಾಗಿ ಹೋಗಿದ್ದ ಶಾಸಕರು ಮರಳಿ ಜನವರಿಯಲ್ಲಿ ಕಾಂಗ್ರೆಸ್ ಗೆ ಮರಳಿ ಬರುತ್ತಾರೆ ಎಂಬ ಹೇಳಿಕೆಯ ನಡುವೆಯೇ ಅಥಣಿಯಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಪಕ್ಷಾಂತರಗೊಂಡು ಬೈ ಎಲೆಕ್ಷನ್ ಲ್ಲಿ ಗೆಲುವು ಸಾಧಿಸಿದ್ದ, ಶಾಸಕ ಕುಮಠಳ್ಳಿಗೆ ಮರಳಿ ಬಿಜೆಪಿಯಿಂದ ಟಿಕೆಟ್ ಕೊಡಲಾಗುತ್ತದೆ ಎಂಬ ಆರ್ ಎಸ್ ಎಸ್ ಮುಖಂಡ ಅರವಿಂದ ದೇಶಪಾಂಡೆ ಅವರ ಹೇಳಿಕೆ ಇದೀಗ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರನ್ನು ವಿಚಲಿತರನ್ನಾಗಿಸಿದೆ.
ಹೌದು... ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಿ ಫಾರ್ಮ್ ಗೊಂದಲಗಳಿಗೆ ಮತ್ತು ಹಲವು ಊಹಾಪೋಹಗಳಿಗೆ ಇಂದು ಅಥಣಿಯಲ್ಲಿ ಆರ್ ಎಸ್ ಎಸ್ ಪ್ರಮುಖ ಮುಖಂಡರು ತೆರೆ ಎಳೆದಿದ್ದಾರೆ.
ಇದೀಗ ಹಾಲಿ ಶಾಸಕ ಮಹೇಶ್ ಕುಮಠಳ್ಳಿಗೆ ಆರ್ ಎಸ್ ಎಸ್ ಪ್ರಮುಖ ಮುಖಂಡರಾದ ಅರವಿಂದ್ ದೇಶಪಾಂಡೆ ಅವರ ಕೃಪಾಶೀರ್ವಾದ ಸಿಕ್ಕಿದೆ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಮಹೇಶ್ ಕುಮಠಳ್ಳಿಯೇ ಅಭ್ಯರ್ಥಿ. ಆದರೆ, 2023ರ ಚುನಾವಣೆಯಲ್ಲಿ ಆಯ್ಕೆ ಆದ ನಂತರ ನಮ್ಮ ತಾಲೂಕಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಅಥಣಿಯಲ್ಲಿ ಆರ್ ಎಸ್ ಎಸ್ ಮುಖಂಡರು ತಿಳಿಸಿದರು.
ಆರ್ ಎಸ್ ಎಸ್ ಮುಖಂಡರ ಹೇಳಿಕೆ ಇದೀಗ ಕಾಂಗ್ರೆಸ್ ಗಿಂತ ಅಥಣಿಯ ಸೋಲಿಲ್ಲದ ಸರದಾರ ಎಂದೇ ಖ್ಯಾತಿವೆತ್ತಿರುವ ಲಕ್ಷ್ಮಣ್ ಸವದಿಗೆ ನುಂಗಲಾರದ ತುತ್ತು ಎಂದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
PublicNext
12/08/2022 08:28 pm