ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫಾಜಿಲ್ ಕುಟುಂಬಕ್ಕೆ ಯಾಕೆ ಪರಿಹಾರ ಕೊಟ್ಟಿಲ್ಲ?: ಖರ್ಗೆ ಪ್ರಶ್ನೆ

ಬೆಂಗಳೂರು: ಸರ್ಕಾರ ಕೊಲೆಯಾದವರ ವಿಚಾರದಲ್ಲೂ ತಾರತಮ್ಯ ತೋರುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದ್ದಿದ್ದರೆ ಕರಾವಳಿ ಭಾಗದಲ್ಲಿ ಇಂತಹ ಕೊಲೆಗಳೇ ಆಗುತ್ತಿರಲಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊಲೆ ಹಾಗೂ ವಿಧ್ವಂಸಕ ಕೃತ್ಯಗಳಲ್ಲಿ ತೊಡಗುವವರು ಹಿಂದು ಅಥವಾ ಮುಸ್ಲಿಂ ಯಾರೇ ಆಗಿರಲಿ. ಅವರ ಮೇಲೆ ನಿಸ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು. ಆದರೆ ಇಲ್ಲಿ ಒಬ್ಬರಿಗೆ ರಕ್ಷಣೆ ಕೊಡೋದು, ಪರಿಹಾರ ಕೊಡೋದು. ಇನ್ನೊಬ್ಬರಿಗೆ ಪರಿಹಾರವೂ ಇಲ್ಲ. ಸಾಂತ್ವನವೂ ಇಲ್ಲ. ಇದು ಸರಕಾರದ ಅಸಂವಿಧಾನಿಕ ನಡೆ ಎಂದು ಖರ್ಗೆ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

01/08/2022 07:29 am

Cinque Terre

92.75 K

Cinque Terre

55

ಸಂಬಂಧಿತ ಸುದ್ದಿ