ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರದ ಆರೋಪ: ಗ್ರಾಮ ಪಂಚಾಯತಿ ಸದಸ್ಯರಿಂದಲೇ ಪ್ರತಿಭಟನೆ

ಗದಗ: ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆದಿದೆ ಅಂತ ಆರೋಪಿಸಿ ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಕೆಲ ಸದಸ್ಯರ ವಿರುದ್ಧ ಉಳಿದ ಸದಸ್ಯರು ಪ್ರತಿಭಟನೆ ನಡೆಸಿರುವ ಘಟನೆ ಗದಗದ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

ಈ ಬಗ್ಗೆ ಮಾತನಾಡಿದ ಗ್ರಾ.ಪಂ.ಸದಸ್ಯ ಪ್ರವೀಣ ಸೂರಣಗಿ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಪತಿಯಿಂದ ಹಸ್ತಕ್ಷೇಪ ನಡೆಯುತ್ತಿದೆ. ಮೇಲಾಧಿಕಾರಿಗಳು ಒಳಗೊಂಡು ಕೆಲ ಸದಸ್ಯರು ಭ್ರಷ್ಟಾಚಾರ, ದುರಾಡಳಿತ,ದೌರ್ಜನ್ಯ, ಮಾಹಿತಿ ಕದ್ದಾಲಿಕೆ ಮಾಡುತ್ತಿದ್ದಾರೆ. ಇವೆಲ್ಲ ನಡೆದಿದ್ದರೂ ಮೇಲಾಧಿಕಾರಿಗಳು ಗಮನಹರಿಸದಿರುವುದು ವಿಪರ್ಯಾಸ ಎಂದಿದ್ದಾರೆ..

ಅಲ್ಲದೇ 14ನೇ, 15ನೇ ಹನಕಾಸಿನಲ್ಲಿ ಮತ್ತು ವರ್ಗ 1 ರಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ನಮ್ಮ ಗ್ರಾಮ ಪಂಚಾಯತಿಯಲ್ಲಿ ಕೆಲ ನಾಲ್ಕೈದು ಜನ ಸದಸ್ಯರನ್ನು ಹೊರತು ಪಡಿಸಿ ಉಳಿದವರಿಗೆ ಅಸ್ಪಷ್ಟ ಮಾಹಿತಿ ನೀಡುತ್ತಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ಕಾನೂನು ಗಾಳಿಗೆ ತೂರಿ ಹಿಟ್ಲರ್ ಆಳ್ವಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು. ಇನ್ನು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಬೇಕು. ಸಿ.ಇ.ಒ ಹಾಗೂ ಇಒ ಸ್ಥಳಕ್ಕೆ ಬರ್ಬೇಕು ಅಂತ ಪ್ರತಿಭಟನೆ ವೇಳೆ ಹಿಡಿದ್ರು..

ಸುರೇಶ ಲಮಾಣಿ, ಪಬ್ಲಿಕ್ ನೆಕ್ಸ್ಟ್, ಗದಗ

Edited By : Somashekar
PublicNext

PublicNext

21/07/2022 04:52 pm

Cinque Terre

39.52 K

Cinque Terre

0

ಸಂಬಂಧಿತ ಸುದ್ದಿ