ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ACB)ಯನ್ನ ರದ್ದುಗೊಳಿಸಿ ಎಂದು ಮಾಜಿ ಪೊಲೀಸ್ ಅಧಿಕಾರಿ ಹಾಗೂ ಆಮ್ ಆದ್ಮಿ ಪಕ್ಷದ ಕರ್ನಾಟಕ ಮುಖಂಡ ಭಾಸ್ಕರ್ ರಾವ್ ಟ್ವಿಟರ್ ಮೂಲಕ ಒತ್ತಾಯಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಎ.ಪಿ.ಸಂದೇಶ್ ಇತ್ತೀಚಿಗೆ ಎಸಿಬಿ ಕಾರ್ಯವೈಖರಿಯನ್ನ ಹೇಳಿಕೆ ಕೊಟ್ಟಿದ್ದರು. ಆ ಹಿನ್ನೆಲೆಯಲ್ಲಿಯೇ ಭಾಸ್ಕರ್ ರಾವ್ ಮಾತನಾಡಿದ್ದು, ನ್ಯಾಯಮೂರ್ತಿಗಳು ಹೇಳಿರೋದು 100% ಸತ್ಯ ಅಂತಲೇ ಹೇಳಿಕೊಂಡಿದ್ದಾರೆ.
ಲೋಕಾಯುಕ್ತ ನಿಯಂತ್ರಿಸಲು ಕಾಂಗ್ರೆಸ್ ಸರ್ಕಾರ ಎಸಿಬಿ ರಚಿಸಿದೆ. ಆದರೆ, ದೇಶದಲ್ಲಿ ಎರಡು ಭ್ರಷ್ಟಾಚಾರ ನಿಗ್ರಹ ದಳ ಹೊಂದಿದ ಏಕೈಕ ರಾಜ್ಯ ಅದು ಕರ್ನಾಟಕ ಅಂತಲೇ ಭಾಸ್ಕರ್ ರಾವ್ ಹೇಳಿದ್ದಾರೆ. ಈಗಿರೋ ಎಸಿಬಿ ಮುಚ್ಚಿ ಬಲವಾದ ಸ್ವತಂತ್ರ ಲೋಕಾಯುಕ್ತ ಕಾರ್ಯ ನಿರ್ವಹಿಸಬೇಕು ಎಂದು ಭಾಸ್ಕರ್ ರಾವ್ ಸಲಹೆ ನೀಡಿದರು.
PublicNext
08/07/2022 05:37 pm