ಬೆಂಗಳೂರು: ರಾಜ್ಯವೇ ಕುತೂಹಲದಿಂದ ಎದುರು ನೋಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ತಯಾರಿ ಏನೋ ನಡೆಯುತ್ತಿದೆ. ಆದರೆ ಬಿಬಿಎಂಪಿ ಎಡವಟ್ಟು ಅಥವಾ ಉದ್ದೇಶ ಪೂರ್ವಕವೋ ತಪ್ಪಿನಿಂದ ವಾರ್ಡ್ ವಿಂಗಡಣೆ ವರದಿ ವಾಪಸ್ ಬಂದಿದೆ. ಆ ಕುರಿತಾದ ಸ್ಟೋರಿ ಡಿಟೇಲ್ಸ್ ಇಲ್ಲಿದೆ.
ಅಂದಹಾಗೆ 8 ವಾರಗಳ ಒಳಗಾಗಿ ಚುನಾವಣೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಬಿಬಿಎಂಪಿ ಹೇಳಿದೆ. ಆ ಹಿನ್ನೆಲೆಯಲ್ಲಿ ಒಂದಿಲ್ಲೊಂದು ತಯಾರಿ ಮಾಡಿಕೊಳ್ತಿರುವ ಬಿಬಿಎಂಪಿ ವಾರ್ಡ್ ಮರು ವಿಂಗಡಣಾ ಕರಡು ಸಿದ್ಧಪಡಿಸಿದೆ. 198 ಇದ್ದ ವಾರ್ಡ್ ಸಂಖ್ಯೆ 243 ಆಗಿದೆ. ಸರಾಸರಿ 28 ಸಾವಿರ ಮತದಾರರಂತೆ ವಾರ್ಡ್ ವಿಂಗಡಣೆ ಮಾಡಲಾಗಿದೆ. ಆದರೆ ಇಲ್ಲೆ ಇರೋದು ಪಾಲಿಕೆ ಅಸಲಿ ಆಟ.
ಎಸ್, ನಿನ್ನೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಲ್ಲಿಸಿದ ವಾರ್ಡ್ ಮರು ವಿಂಗಡಣೆ ಕರಡು ಸರ್ಕಾರ ವಾಪಸ್ ಕಳುಹಿಸಿದೆ ಎಂದು ತಿಳಿದು ಬಂದಿದೆ. ಕಾರಣ ಸುಪ್ರೀಂ ಕೋರ್ಟ್ ಆದೇಶ ದಿಕ್ಕರಿಸಿರುವುದು, 2020 ಬಿಬಿಎಂಪಿ ಕಾಯ್ದೆ ಉಲ್ಲಂಘಿಸಿ ಕರಡು ಸಿದ್ದಪಡಿಸಿರೋದು, ಒಂದು ವಾರ್ಡ್ ಎರಡು ವಿಧಾನ ಸಭಾ ಕ್ಷೇತ್ರಕ್ಕೆ ವಿಂಗಡಣೆ ಆಗದಂತೆ ನೋಡಿಕೊಳ್ಳದಿರೋದು, ಹೀಗೆ ಹಲವು ಲೋಪಗಳನ್ನು ಒಳಗೊಂಡ ವಾರ್ಡ್ ಮರು ವಿಂಗಡಣೆ ಕರಡು ಸರ್ಕಾರ ತಿರಸ್ಕರಿಸಿದೆ.
ಇದೇ ವೇಳೆ ಸರ್ಕಾರಕ್ಕೆ ಸಲ್ಲಿಕೆಯಾಗಿ ವಾಪಸ್ ಬಂದಿರುವ ವಾರ್ಡ್ ಮರು ವಿಂಗಡಣಾ ಕರಡನ್ನು ನಾವೂ ಸಲ್ಲಿಸಿಯೇ ಇಲ್ಲ. ಇನ್ಮೇರೆಡು ದಿನದಲ್ಲಿ ಸಲ್ಲಿಸಕಾಗುತ್ತದೆ ಎಂದು ತಪ್ಪನ್ನು ಮರೆಮಾಚುವ ಕೆಲಸ ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದಾರೆ.
ಒಟ್ಟಾರೆ ಬಿಬಿಎಂಪಿ ಚುನಾವಣೆಗೆ ಶಾಸಕರು, ಸಚಿವರಿಗೆ ಮನಸ್ಸಿಲ್ಲದ ಮನಸ್ಸಿನಲ್ಲೇ ಕೆಲಸ ಮಾಡ್ತಿದ್ದಾರೆ. ಚುನಾವಣೆ ಮತ್ತಷ್ಟು ವಿಳಂಬ ಮಾಡುವ ತಂತ್ರ ಅಂತಲೂ ಹೇಳಲಾಗುತ್ತದೆ.
PublicNext
02/06/2022 08:45 pm