ಬೆಂಗಳೂರು: ಮುಗ್ಧ ಮಕ್ಕಳು ಯಾರದ್ದೋ ಮಾತು ಕೇಳಿ ಕೋರ್ಟ್ ಆದೇಶ ಪಾಲಿಸಲೇ ಹಟ ಹಿಡಿದಿದ್ದಾರೆ. ಸಂವಿಧಾನ ಹಾಗೂ ಕೋರ್ಟ್ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ವಿಚಾರವಾಗಿ ಯಾರೂ ಗಲಾಟೆ ಮಾಡಬಾರದು. ಹಿಜಾಬ್ ವಿಚಾರದಲ್ಲಿ ನಾವು ಇಷ್ಟು ದಿನ ಮೃದು ಧೋರಣೆ ಹೊಂದಿದ್ದೆವು. ಆದರೆ ಇನ್ಮುಂದೆ ಹಾಗಲ್ಲ. ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ಅಂತವರ ಮೇಲೆ ಯಾವುದೇ ಮುಲಾಜಿಲ್ಲ. ಪೋಷಕರು ಹಾಗೂ ವಿದ್ಯಾರ್ಥಿಗಳು ಕೋರ್ಟ್ ಆದೇಶ ಪಾಲಿಸಬೇಕು ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
PublicNext
16/02/2022 02:52 pm