ಕೊಲೋಂಬೋ: ಅಧ್ಯಕ್ಷ ಗೊಟಬಯಾ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ನಂತರ ಶ್ರೀಲಂಕಾ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಪ್ರಧಾನಿ ಕಚೇರಿಯನ್ನು ಉಲ್ಲೇಖಿಸಿ ಎಎಎಫ್‌ಪಿ ವರದಿ ಮಾಡಿದೆ.
ಈ ನಡುವೆ ದೇಶದಲ್ಲಿ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ನಡುವೆ, ಪ್ರತಿಭಟನಾಕಾರರು ಶ್ರೀಲಂಕಾದ ಪ್ರಧಾನಿ ಕಚೇರಿಯತ್ತ ತೆರಳುತ್ತಿದ್ದು, ಕೊಲಂಬೊದ ರಸ್ತೆಗಳಲ್ಲಿ ಪ್ರತಿಭಟನೆ ಮತ್ತೆ ಭುಗಿಲೆದ್ದಿದೆ. ಅಶ್ರುವಾಯು ಶೆಲ್ ದಾಳಿಯ ನಡುವೆ ಭದ್ರತಾ ನಿಯೋಜನೆಯನ್ನು ಉಲ್ಲಂಘಿಸಿ ಕೋಪೋದ್ರಿಕ್ತ ನೂರಾರು ಪ್ರತಿಭಟನಾಕಾರರು ಕೊಲಂಬೊದಲ್ಲಿರುವ ಶ್ರೀಲಂಕಾ ಪ್ರಧಾನಿ ನಿವಾಸದ ಆವರಣವನ್ನು ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ. ಕೊಲಂಬೊದಲ್ಲಿರುವ ಶ್ರೀಲಂಕಾ ಪ್ರಧಾನಿ ನಿವಾಸಕ್ಕೆ ಪ್ರವೇಶಿಸಲು ಗೋಡೆಯನ್ನು ಏರಿದ ಪ್ರತಿಭಟನಾಕಾರರನ್ನು ಚದುರಿಸಲು ಮಿಲಿಟರಿ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸಿದ್ದಾರೆ ಎನ್ನಲಾಗಿದೆ. ಕೊಲಂಬೊದಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದ ಹಿನ್ನೆಲೆಯಲ್ಲಿ ಶ್ರೀಲಂಕಾ ಪ್ರಧಾನಿ ನಿವಾಸದಲ್ಲಿ ಭಾರೀ ಸೇನಾ ಉಪಸ್ಥಿತಿ ಇರೋದನ್ನು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
PublicNext
13/07/2022 12:58 pm