ಬೆಂಗಳೂರು: ಪಿಎಸ್ಐ ಹಗರಣದಲ್ಲಿ ಸಚಿವ ಅಶ್ವಥ್ ನಾರಾಯಣ್ ಹೆಸ್ರು ಕೇಳಿ ಬರುತ್ತಿದ್ದು, ಈ ವಿಚಾರವಾಗಿ ಅಭ್ಯರ್ಥಿ
ದರ್ಶನ್ ಗೌಡ ತಂದೆ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ್ದಾರೆ.
ಅಶ್ವಥ್ ನಾರಾಯಣ ಹಾಗೂ ಡಿ ಕೆ ಶಿವಕುಮಾರ್ ರಾಜಕೀಯ ವೈಷಮ್ಯಕ್ಕೆ ನನ್ನ ಮಗನ ಹೆಸರು ಬಳಕೆಯಾಗ್ತಿದೆ. ಹಿಂದೆ ಎಸ್.ಎಂ.ಕೃಷ್ಣ ಸಿಎಂ ಆಗಿದ್ದಾಗ ಡಿಕೆಶಿ ನಮ್ಮ ಮನೆಗೆ ಬಂದಿದ್ರು.
ಇವಾಗ ಅವ್ರು ನನ್ನ ಗುರುತು ಹಿಡಿಯಲ್ಲ. ಅಶ್ವಥ್ ನಾರಾಯಣ್ ಅಣ್ಣ ಸತೀಶ್ ಪರಿಚಯ ಇದ್ದಾರೆ. ನನ್ನ ಮಗ ಅಲ್ಲಾ, ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗ್ಲಿ. ಉಪ್ಪು ತಿಂದವರು ನೀರು ಕುಡಿಬೇಕು. ನನ್ನ ಮಗನನ್ನ ವಿಚಾರಣೆ ಕರೆದಿದ್ರು ಹೋಗಿದ್ದ. ಮತ್ತೆ ಕರೆದ್ರೆ ಹೋಗ್ತಾನೆ ಎಂದು ದರ್ಶನ್ ತಂದೆ ವೆಂಕಟಪ್ಪ ತಿಳಿಸಿದ್ದಾರೆ.
PublicNext
02/05/2022 07:11 pm