ಬೆಂಗಳೂರು: ಜೂನ್ 23 ಪಠ್ಯಪುಸ್ತಕ ಪರಿಷ್ಕರಣೆಯಿಂದಾಗಿ ಉಂಟಾಗಿರುವ ಗೊಂದಲ,ಉದ್ಭವವಾಗಿರುವ ಸಮಸ್ಯೆಗೆ ಸಂಬಂಧಿಸಿದಂತೆ ಕಂದಾಯ ಸಚಿವ ಆರ್ ಅಶೋಕ್ ಅವರು ಸುದೀರ್ಘವಾದ ಉತ್ತರವನ್ನು ಕೊಟ್ಟಿದ್ದಾರೆ.
ಗುರುವಾರ ಮಧ್ಯಾಹ್ನ ವಿಧಾನಸೌಧದಲ್ಲಿ ಪತ್ರಿಕಾಗೋಷ್ಟಿಯನ್ನು ಕರೆದಿದ್ದ ಸಚಿವ ಅಶೋಕ್ ಪರಿಷ್ಕರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಡಿರುವ ಆರೋಪ, ದೇವೇಗೌಡರ ಪತ್ರ ಎಲ್ಲದಕ್ಕೂ ಉತ್ತರ ಕೊಟ್ಟರು.
ಸಿದ್ದರಾಮಯ್ಯ ನವರ ಸರ್ಕಾರ ಚಾಲ್ತಿಗೆ ತಂದಿದ್ದ ಪಠ್ಯ ಪುಸ್ತಕಗಳಲ್ಲಿದ್ದ ತಪ್ಪುಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು.. ಅಶೋಕ್ ಅವರ ಜೊತೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಸಚಿವ ಭೈರತಿ ಬಸವರಾಜ್ ಉಪಸ್ಥಿತರಿದ್ದರು..
ಶಿಕ್ಷಣ ಸಚಿವ ನಾಗೇಶ್ ನಾಪತ್ತೆ ಆಗಿದ್ದರು...ಪತ್ರಿಕಾಗೋಷ್ಟಿ ಯ ಹೈ ಲೈಟ್ಸ್ ಇಲ್ಲಿದೆ.....
ಪ್ರವೀಣ್ ರಾವ್
PublicNext
23/06/2022 05:53 pm