ಉಳ್ಳಾಲ: ಹಿಜಾಬ್ ಪರ ಹೋರಾಟ ನಡೆಸುತ್ತಿರುವ ಮಂಗಳೂರು ವಿ.ವಿ ಯ ವಿದ್ಯಾರ್ಥಿನಿಯರಿಗೆ ನನ್ನಿಂದಾದ ನೆರವು ನೀಡಿದ್ದರೂ ಸಹ "ನಾನು ಕ್ರಿಕೆಟ್ ಆಟದಲ್ಲಿ ನಿರತನಾಗಿದ್ದೇನೆ ಎಂಬ ಅವರ ಹೇಳಿಕೆ"ಯು ದುರುದ್ದೇಶ ಅಥವಾ ರಾಜಕೀಯ ಪ್ರೇರಿತವಾ ಗೊತ್ತಿಲ್ಲ ಎಂದು ವಿದಾನಸಭಾ ವಿಪಕ್ಷ ನಾಯಕ ಯು.ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನ ವಿ.ವಿ ಕಾಲೇಜಿನಲ್ಲಿ ಹಿಜಾಬ್ ಧರಿಸುವ ವಿಚಾರದಲ್ಲಿ ಪದವಿ ಕಾಲೇಜಿನ 16 ವಿದ್ಯಾರ್ಥಿನಿಯರು ಹೈಡ್ರಾಮ ನಡೆಸುತ್ತಿದ್ದು ನಿನ್ನೆ ತರಗತಿ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳಲ್ಲಿ ತಮ್ಮ ಸಮಸ್ಯೆ ತೋಡಿಕೊಂಡಿದ್ದರು.ಜಿಲ್ಲಾಧಿಕಾರಿಗಳಲ್ಲೂ ತಮ್ಮ ಸಮಸ್ಯೆಗೆ ಪರಿಹಾರ ಸಿಗದೆ ಶಾಸಕ ಯು.ಟಿ ಖಾದರ್ ಅವರೂ ತಮ್ಮ ಸಹಾಯಕ್ಕೆ ಬಾರದೆ ಅಡ್ಯಾರಿನಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾಟದಲ್ಲಿ ನಿರತರಾಗಿರುವುದಾಗಿ ವಿದ್ಯಾರ್ಥಿನಿಯರು ಆರೋಪಿಸಿದ್ದರು.
ವಿದ್ಯಾರ್ಥಿನಿಯರ ಆರೋಪಕ್ಕೆ ಶಾಸಕ ಯು.ಟಿ ಖಾದರ್ ಪ್ರತಿಕ್ರಿಯಿಸಿದ್ದು ಅವರ ಹೇಳಿಕೆಯ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕಾಗುತ್ತದೆ.ನನಗೆ ವಿದ್ಯಾರ್ಥಿನಿಯರ ಕಾಲ್ ಬಂದಾಗ ನನ್ನಿಂದಾದ ನೆರವು ನೀಡಿದ್ದೇನೆ.ವಿ.ಸಿ,ಜಿಲ್ಲಾಧಿಕಾರಿ ಜೊತೆ ಮಾತುಕತೆಗೆ ಸಹಾಯ ಮಾಡಿದ್ದೇನೆ.ವಿದ್ಯಾರ್ಥಿನಿಯರಿಗೆ ಕಾನೂನನ್ನು ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇನೆ.ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇಲ್ಲ ಅಂತಾನೂ ಹೇಳಿದ್ದು,ಕಾನೂನು ಪ್ರಕಾರ ಹೋರಾಟ ಮಾಡಲು ಸೂಚಿಸಿದ್ದೇನೆ.
ಆ ಬಳಿಕ ವಿದ್ಯಾರ್ಥಿನಿಯರು ಒಂದು ವಾರ ನನ್ನನ್ನು ಸಂಪರ್ಕ ಮಾಡಿಲ್ಲ.ಆ ಮೇಲೆ ನಾನೇ ವಿಸಿ ಜೊತೆ ಫೋನ್ ಮಾಡಿ ಮಾತನಾಡಿದ್ದು,ವಿದ್ಯಾರ್ಥಿನಿಯರಿಗೆ ಕಚೇರಿಯಿಂದ ಫೋನ್ ಮಾಡಿಸಿದ್ದಲ್ಲದೆ,ನಾನೇ ಖುದ್ದು ಫೋನ್ ಮಾಡಿದ್ದೇನೆ.ಆದರೆ ವಿದ್ಯಾರ್ಥಿನಿಯರು ಕರೆ ಸ್ವೀಕಾರ ಮಾಡದೆ ,ರಾಂಗ್ ನಂಬರ್ ಅಂತಾ ಹೇಳಿ ಕರೆ ಕಟ್ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸರ್ಕಾರದ ಚೀಫ್ ಸೆಕ್ರೆಟರಿ ಜೊತೆ ಮಾತನಾಡಿದ್ದು,ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿನಿಯರ ಪರ ಹೆತ್ತವರು ಈ ಬಗ್ಗೆ ಕಾಳಜಿ ವಹಿಸಬೇಕು.ಮಕ್ಕಳ ಜೊತೆ ಹೆತ್ತವರು ಮಾತನಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಯು.ಟಿ.ಖಾದರ್ ಹೇಳಿದ್ದಾರೆ.
PublicNext
31/05/2022 02:37 pm