ಗೌಹಾಟಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯರ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಶಿವ-ಪಾರ್ವತಿ ವೇಷಧಾರಿಗಳು ಬೀದಿ ನಾಟಕ ಆಡಿದ್ದಾರೆ.
ಅಸ್ಸಾಮ್ ರಾಜ್ಯದ ನಾಗೋನ್ ಪಟ್ಟಣದಲ್ಲಿ ಈ ಬೀದಿ ನಾಟಕ ನಡೆದಿದೆ. ಇದರ ದೃಶ್ಯಗಳು ವೈರಲ್ ಆದ ಬೆನ್ನೆಲ್ಲೇ ಸ್ಥಳೀಯ ಪೊಲೀಸರು ಶಿವ ಪಾತ್ರಧಾರಿ ಬಿರಿಂಚಿ ಬೋರ ಎಂಬಾತರನ್ನು ಬಂಧಿಸಿದ್ದಾರೆ. ನಟಿ ಪರಿಶಿಮಿತ ಅವರು ಇದರಲ್ಲಿ ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ.
ಶಿವ-ಪಾರ್ವತಿಯರು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಬಂದಿದ್ದಾರೆ. ಆಗ ಪೆಟ್ರೋಲ್ ಖಾಲಿಯಾಗಿ ಬೈಕ್ ನಿಲ್ಲುತ್ತದೆ. ಇದಕ್ಕೆ ಅಸಮಾಧಾನಿತರಾದ ಪಾರ್ವತಿಯು ಶಿವನನ್ನು ಶಪಿಸುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಶಿವ, ನಾನೇನು ಮಾಡಲಿ? ಎಷ್ಟು ದುಡ್ಡು ಕೊಟ್ಟು ಪೆಟ್ರೋಲ್ ಹಾಕಿಸಿದರೂ ಬೇಗ ಖಾಲಿ ಆಗಿತ್ತದೆ. ನೀನು ನನ್ನನ್ನು ಬಯ್ಯುವ ಬದಲು ನರೇಂದ್ರ ಮೋದಿ ಸರ್ಕಾರಕ್ಕೆ ಬಯ್ಯಿ ಎಂದು ಹೇಳಿದ್ದಾರೆ.
ಈ ದೃಶ್ಯದ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶಿತವಾಗಿವೆ. ಈ ಬೆಳವಣಿಗೆ ನಂತರ ಶಿವ ವೇಷಧಾರಿ ಬಿರಿಂಚಿ ಬೋರ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
PublicNext
10/07/2022 05:43 pm