ಬೆಳಗಾವಿ: ಕಳೆದ ಎರಡು ದಿನಗಳ ಹಿಂದಷ್ಟೇ ಕನ್ನಡ ಫಲಕಕ್ಕೆ ಮಸಿ ಹಾಕಿ ವಿಕೃತಿ ತೋರಿದ ನಂತರ ಈಗ ಎಂಇಎಸ್ ನಾಯಕರು ಹಾಗೂ ಕಾರ್ಯಕರ್ತರು ಹುತಾತ್ಮ ದಿನ ಆಚರಿಸಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ.
ಅನುಮತಿ ಇಲ್ಲದೇ ಬೆಳಗಾವಿ ನಗರದ ಕಿರ್ಲೋಸ್ಕರ್ ರಸ್ತೆಯ ವೃತ್ತದಲ್ಲಿ ಹುತಾತ್ಮ ದಿನ ಆಚರಿಸಲಾಗಿದೆ. ಹುತಾತ್ಮ ವೃತ್ತದಲ್ಲಿ ಸುಮಾರು 50ಕ್ಕೂ ಜನ ಜಮಾವಣೆಗೊಂಡು ಹುತಾತ್ಮ ದಿನ ಆಚರಿಸಿದ್ದಾರೆ. ಇದಕ್ಕೆ ಪೊಲೀಸ್ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆದಿರಲಿಲ್ಲ. ಖಡೇಬಜಾರ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
PublicNext
17/01/2022 01:41 pm