ಮುಂಬೈ: ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ರಿಪಬ್ಲಿಕ್ ಟಿ.ವಿ.ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಹಾಗಿದ್ದರೂ ಮತ್ತೊಂದು ಪ್ರಕರಣದಲ್ಲಿ ಉದ್ಧವ್ ಠಾಕ್ರೆ ಸರ್ಕಾರವು ರಿಪಬ್ಲಿಕ್ ಸಿಇಒ ವಿಕಾಸ್ ಕಾಂಚನ ದಾನಿ ಅವರನ್ನು ಬಂಧಿಸಿದೆ.
ನಕಲಿ ಟಿಆರ್‌ಪಿಗೆ ಸಂಬಂಧಿಸಿದಂತೆ ಇದಾಗಲೇ ಅರ್ನಬ್ ಗೋಸ್ವಾಮಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಕೇಸ್ ತನಿಖಾ ಹಂತದಲ್ಲಿದ್ದರೂ ಇದೀಗ ವಿಕಾಸ್ ಅವರನ್ನು ಬಂಧಿಸಲಾಗಿದೆ.
ಕೆಲವು ಕುಟುಂಬಗಳಿಗೆ ಹಣ ನೀಡಿ ನಿರಂತರವಾಗಿ ಟಿವಿ ಆನ್ ಮಾಡಿಸಿ ಟಿಆರ್ಪಿಯನ್ನು ತಿರುಚಲಾಗಿದೆ ಎಂದು ಬ್ರಾಡ್‍ಕಾಸ್ಟ್ ಆಡಿಯೆನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಹನ್ಸಾ ರಿಸರ್ಚ್ ಏಜೆನ್ಸಿ ಮುಖಾಂತರ ದೂರು ನೀಡಿತ್ತು. ಈ ಸಂಬಂಧ ತನಿಖೆ ಆರಂಭವಾಗಿದೆ. ಮಹಾರಾಷ್ಟ್ರ ಪೊಲೀಸರು ವಿಕಾಸ್ ಅವರನ್ನು ಇಂದು ಬೆಳಗ್ಗೆ ಮುಂಬೈನಲ್ಲಿರುವ ಅವರ ನಿವಾಸದಲ್ಲಿ ಕ್ರೈಮ್ ಇಂಟಲಿಜೆನ್ಸಿ ಘಟಕದ ಪೊಲೀಸರು ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
PublicNext
13/12/2020 06:16 pm