ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಯಾವುದೇ ಭೂಮಿಯನ್ನ ರಾಷ್ಟ್ರೀಯ ಹೆದ್ದಾರಿ ಎಂದು ಕೇಂದ್ರ ಘೋಷಿಸಬಹುದು'

ನವದೆಹಲಿ: ಯಾವುದೇ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ.

ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು 2019ರಲ್ಲಿ ಮದ್ರಾಸ್‌ ಹೈಕೋರ್ಟ್‌ ರದ್ದುಪಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್‌ವಿಲ್ಕರ್‌, ಬಿ.ಆರ್‌.ಗವಾಯಿ ಹಾಗೂ ಕೃಷ್ಣ ಮುರಾರಿ ಅವರಿದ್ದ ಪೀಠವು ಕೇಂದ್ರ ಸರ್ಕಾರಕ್ಕೆ ಹಸಿರು ನಿಶಾನೆ ನೀಡಿದೆ. ‘ಹೆದ್ದಾರಿ ಹಾದು ಹೋಗುವ ಆ ಪ್ರದೇಶದ ಜನರ ಏಳಿಗೆಗಾಗಿ ಹಾಗೂ ಹೊಸ ಆರ್ಥಿಕ ಅವಕಾಶವನ್ನು ರೂಪಿಸುವುದಕ್ಕಾಗಿ ಮತ್ತು ದೇಶದ ಆರ್ಥಿಕತೆ ದೃಷ್ಟಿಯಿಂದ ಹೊಸ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ. ರಾಜ್ಯವೊಂದರಲ್ಲಿ ಇರುವ ಹೆದ್ದಾರಿಯು, ಸುಸ್ಥಿರ ಅಭಿವೃದ್ಧಿಗೆ ಪಥವಾಗುತ್ತದೆ. ಇದರಿಂದ ಜನರಿಗೂ ಅನುಕೂಲವಿದೆ’ ಎಂದು ಪೀಠವು ಹೇಳಿದೆ.

ಈ ಮೂಲಕ ಭಾರತ್‌ಮಾಲಾ ಯೋಜನೆಯಡಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ಚೆನ್ನೈ–ಕೃಷ್ಣಗಿರಿ–ಸೇಲಂ ನಡುವೆ ನಿರ್ಮಾಣವಾಗಲಿರುವ ಎಂಟು ಪಥಗಳ ಎಕ್ಸ್‌ಪ್ರೆಸ್‌ವೇಗೆ ಹಸಿರು ನಿಶಾನೆ ಸಿಕ್ಕಿದೆ.

Edited By : Vijay Kumar
PublicNext

PublicNext

08/12/2020 10:49 pm

Cinque Terre

61.84 K

Cinque Terre

6

ಸಂಬಂಧಿತ ಸುದ್ದಿ