ಪಟನಾ : 243 ಸದಸ್ಯರ ಬಿಹಾರ ವಿಧಾನಸಭೆಯ ಚುನಾವಣೆ ಅಕ್ಟೋಬರ್ 28 ಮತ್ತು ನವೆಂಬರ್ 3 ಮತ್ತು 7 ರಂದು ನಡೆಯಲಿದೆ. ನವೆಂಬರ್ 10 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
ಸದ್ಯ ಚುನಾವಣಾ ಕಣ ರಂಗೇರಿದ್ದು ಎನ್ ಡಿಎ ಅಂಗಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ತಮ್ಮ ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದು, ಬಿಜೆಪಿ 121 ಕ್ಷೇತ್ರಗಳಲ್ಲಿ ಹಾಗೂ ಜೆಡಿಯು 122 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿವೆ.
ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುವುದಾಗಿಯೂ, ಮೈತ್ರಿಕೂಟ ಗೆದ್ದರೆ ಮತ್ತೆ ಅವರೇ ಮುಖ್ಯಮಂತ್ರಿಯೆಂದೂ ಎರಡೂ ಪಕ್ಷಗಳು ಪುನರುಚ್ಚರಿಸಿವೆ.
ಇದರ ಮಧ್ಯೆ ನಿತೀಶ್ ರ ವಿರುದ್ಧ ಬಂಡೆದ್ದು ಎನ್ ಡಿಎದಿಂದ ಹೊರ ನಡೆದ ಲೋಕಜನಶಕ್ತಿ ಪಕ್ಷ (ಎಲ್ಜೆಪಿ) ಹಾಗೂ ಅದರ ಅಧ್ಯಕ್ಷ ಚಿರಾಗ್ ಪಾಸ್ವಾನ್ ಗೆ ಮುಖಭಂಗವಾಗಿದೆ.
ಮಂಗಳವಾರ ಸ್ವತಃ ನಿತೀಶ್, ಬಿಜೆಪಿ ರಾಜ್ಯಾಧ್ಯಕ್ಷ ಸಂಜಯ್ ಜೈಸ್ವಾಲ್ ಮತ್ತು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸೀಟು ಹಂಚಿಕೆ ವಿಚಾರ ಪ್ರಕಟಿಸಿದರು.
PublicNext
07/10/2020 12:44 pm