ಲಂಡನ್: ಸೇಂಟ್ ಜೇಮ್ಸ್ ಅರಮನೆಯಲ್ಲಿ ಇಂದು (ಶನಿವಾರ) ನಡೆದ ಐತಿಹಾಸಿಕ ಸಮಾರಂಭದಲ್ಲಿ 73 ವರ್ಷ ವಯಸ್ಸಿನ ಚಾರ್ಲ್ಸ್ III ರಾಜನಾಗಿ ಘೋಷಿಸಲ್ಪಟ್ಟಿದ್ದಾರೆ.
ಬ್ರಿಟನ್‌ನ ರಾಣಿ ಎಲಿಜಬೆತ್ II ಅವರ ನಿಧನದಿಂದ ರಾಜಮನೆತನದ ಒಂದು ಅಧ್ಯಾಯ ಅಂತ್ಯಗೊಂಡಿದೆ. ಅವರು ಕೊನೆಯುಸಿರೆಳೆದ ಸಂದರ್ಭದಲ್ಲಿಯೇ ಸಿಂಹಾಸನ ವೇಲ್ಸ್‌ನ ಮಾಜಿ ರಾಜಕುಮಾರ ಚಾರ್ಲ್ಸ್ ಅವರಿಗೆ ದೊರಕಿದೆ. ಬಹಳ ಹಿಂದೆಯೇ ಎಲಿಜಬೆತ್ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದ ಚಾರ್ಲ್ಸ್, ಬ್ರಿಟನ್‌ನ ಮುಂದಿನ ರಾಜನಾಗಿರಲಿದ್ದಾರೆ.
ಚಾರ್ಲ್ಸ್ III ಅವರು ಜನಿಸಿದ್ದು, 1948ರ ನವೆಂಬರ್ 14ರಂದುಸಾಂಡ್ರಿಂಗ್ಹಾಮ್‌ನ ರಾಯಲ್ ಎಸ್ಟೇಟ್‌ನಲ್ಲಿ. ಆಗಿನ್ನೂ ರಾಜಕುಮಾರಿಯಾಗಿದ್ದ ಎಲಿಜಬೆತ್ ಮತ್ತು ಎಡಿನ್‌ಬರ್ಗ್‌ನ ಡ್ಯೂಕ್ ಫಿಲಿಪ್ ಅವರ ಮೊದಲ ಮಗ ಚಾರ್ಲ್ಸ್.
ಚಾರ್ಲ್ಸ್ ಅವರು ಬ್ರಿಟನ್ ರಾಜಮನೆತನದ ಇತಿಹಾಸದಲ್ಲಿಯೇ ಗದ್ದುಗೆ ಏರುತ್ತಿರುವ ಅತ್ಯಂತ ಹಿರಿಯ ವ್ಯಕ್ತಿ ಎನಿಸಿದ್ದಾರೆ. ಅವರ ತಾಯಿ ಎಲಿಜಬೆತ್ ಅವರು 26ನೇ ವಯಸ್ಸಿನಲ್ಲಿ ರಾಣಿ ಪಟ್ಟ ಪಡೆದಿದ್ದರು ಎನ್ನುವುದು ಗಮನಿಸಬೇಕಾದ ಸಂಗತಿ.
PublicNext
10/09/2022 03:25 pm