ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Breaking News: ರಿಷಿ ಸುನಕ್‌ಗೆ ಹಿನ್ನಡೆ; ಯುಕೆ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ

ಲಂಡನ್: ಭಾರಿ ಹೋರಾಟ ನಡುವೆ ಲಿಜ್ ಟ್ರಸ್ ಅವರು ಗೆದ್ದು ಕನ್ಸರ್ವೇಟಿವ್ ಪಕ್ಷದ ನಾಯಕಿ ಮತ್ತು ಯುಕೆ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಬ್ರಿಟನ್ ಪ್ರಧಾನಿಯಾಗಿ ಪದಚ್ಯುತಗೊಂಡ ಬೋರಿಸ್ ಜಾನ್ಸನ್ ಅವರ ನಂತರ ಹೊಸ ನಾಯಕರನ್ನ ಆಯ್ಕೆ ಮಾಡಲು ಆಡಳಿತ ಕನ್ಸರ್ವೇಟಿವ್ ಪಕ್ಷಕ್ಕೆ ಆರು ವಾರಗಳ ಕಾಲ ನಡೆದ ಬಿರುಸಿನ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ.

ಯುಕೆ ಉಸ್ತುವಾರಿ ಪಿಎಂ ಬೋರಿಸ್ ಜಾನ್ಸನ್ ಮಂಗಳವಾರ ರಾಣಿ ಎಲಿಜಬೆತ್ ಅವರನ್ನು ಭೇಟಿ ಮಾಡಲು ಸ್ಕಾಟ್ಲೆಂಡ್‌ಗೆ ತೆರಳಲಿದ್ದಾರೆ. ಈ ವೇಳೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಮಾಜಿ ವಿದೇಶಾಂಗ ಸಚಿವೆ ಟ್ರಸ್ ಯುಕೆಯ ಜೀವನ ವೆಚ್ಚದ ಬಿಕ್ಕಟ್ಟನ್ನು ನಿಭಾಯಿಸಲು ತ್ವರಿತವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ನಾಳೆ ಅವರು ಯುಕೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

Edited By : Vijay Kumar
PublicNext

PublicNext

05/09/2022 05:28 pm

Cinque Terre

52.7 K

Cinque Terre

5

ಸಂಬಂಧಿತ ಸುದ್ದಿ