ನವದೆಹಲಿ: ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ತಾಯಿ, ಪಾವೋಲಾ ಮೈನೋ ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಸೋನಿಯಾ ಗಾಂಧಿಯವರು ಮಾತೃವಿಯೋಗವನ್ನು ಎದುರಿಸುವಂತೆ ಆಗಿದೆ.
ಈ ಕುರಿತಂತೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಇನ್ ಚಾರ್ಜ್ ಕಮ್ಯುನಿಕೇಷನ್ ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಶ್ರೀಮತಿ ಸೋನಿಯಾ ಗಾಂಧಿ ಅವರ ತಾಯಿ ಶ್ರೀಮತಿ ಪಾವೊಲಾ ಮೈನೊ ಅವರು 2022 ರ ಆಗಸ್ಟ್ 27 ರ ಶನಿವಾರದಂದು ಇಟಲಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅಂತ್ಯಕ್ರಿಯೆ ನಿನ್ನೆ ನಡೆಯಿತು ಎಂದು ತಿಳಿಸಿದ್ದಾರೆ.
PublicNext
31/08/2022 07:15 pm