ಲಂಡನ್: ಬ್ರಿಟನ್ ಪ್ರಧಾನ ಮಂತ್ರಿ ಹುದ್ದೆಯ ರೇಸ್‌ನಲ್ಲಿರುವ ಅಲ್ಲಿನ ಮಾಜಿ ಆರ್ಥಿಕ ಸಚಿವ ಹಾಗೂ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರು ಮದುವೆಗೆ ಮುಂಚಿನ ಕೆಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ. 'ನಾನು ಅವಳ ಪಕ್ಕದಲ್ಲಿ ಕುಳಿತುಕೊಳ್ಳಲು ಎಷ್ಟೋ ತರಗತಿಗಳನ್ನು ಬದಲಾಯಿಸಿದ್ದೇನೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಾನು ತೀರಾ ಅಚ್ಚುಕಟ್ಟಿನ ಮನುಷ್ಯ. ಅಕ್ಷತಾ ಯಾವಾಗಲೂ ಗೊಂದಲದಲ್ಲೇ ಇರುವವಳು. ನಾನು ಎಲ್ಲವನ್ನೂ ಮೊದಲೇ ಪ್ಲ್ಯಾನ್ ಮಾಡಿಟ್ಟುಕೊಳ್ಳುವವನು, ಆದರೆ ಅವಳು ಎಲ್ಲವನ್ನೂ ಆ ಕ್ಷಣದಲ್ಲೇ ನಿರ್ಧರಿಸುವವಳು. ಅವಳಿದ್ದರೆ ಮನೆ ತುಂಬ ಬಟ್ಟೆ, ಎಲ್ಲೆಂದರಲ್ಲಿ ಶೂಗಳು ಬಿದ್ದಿರುತ್ತೆ’ ಎಂದು ರಿಷಿ ಹೇಳಿದ್ದಾರೆ. ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡುವಾಗ ತರಗತಿಯಲ್ಲಿ ಅವಳ ಪಕ್ಕ ಕೂರಬೇಕು ಎಂದೇ ಎಷ್ಟೋ ತರಗತಿಗಳನ್ನು ಬದಲಿಸಿಕೊಂಡಿದ್ದೆ ಎಂದು ಪತ್ನಿಯ ಬಗೆಗಿನ ಪ್ರೀತಿಯನ್ನು ವರ್ಣಿಸಿದ್ದಾರೆ. ಹಾಗೆಯೇ ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ಬಗ್ಗೆಯೂ ಮಾತನಾಡಿರುವ ಅವರು, “ನಾನು ನನ್ನದೇ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೂ, ಅವರಿಬ್ಬರ ಜನ್ಮದ ಸಮಯದಲ್ಲೂ ನನಗೆ ಅವರೊಟ್ಟಿಗೆ ಇರಲು ಅವಕಾಶ ಸಿಕ್ಕಿತು. ನಿಜಕ್ಕೂ ನಾನು ಅದೃಷ್ಟವಂತ’ ಎಂದು ರಿಷಿ ಸುನಕ್ ಹೇಳಿದ್ದಾರೆ.
PublicNext
08/08/2022 11:18 am