ಲಂಡನ್: ಬೋರಿಸ್ ಜಾನ್ಸನ್ ಅಧಿಕಾರದಿಂದ ಕೆಳಗಿಳಿದ ನಂತರ ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಹಾಗೂ ಬ್ರಿಟನ್ ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಾದ ಲಿಜ್ ಟ್ರಸ್ ಮತ್ತು ರಿಷಿ ಸುನಕ್ ನಡುವೆ ನೇರ ಹಣಾಹಣಿ ನಡೆಯಲಿದೆ. ಸದ್ಯ ಸಮೀಕ್ಷೆವೊಂದರ ಪ್ರಕಾರ ಪ್ರಧಾನಿ ರೇಸ್ ನಲ್ಲಿ ಲಿಜ್ ಟ್ರಸ್ ಮುಂಚೂಣಿಯಲ್ಲಿದ್ದಾರೆ ಎನ್ನಲಾಗಿದೆ.
'ಯುಗವ್' ಎಂಬ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಟ್ರಸ್ ಅವರು ಭಾರತೀಯ ಸಂಜಾತ ರಿಷಿ ಸುನಕ್ ಅವರಿಗಿಂತಲೂ 38 ಪಾಯಿಂಟ್ಸ್ ಮುನ್ನಡೆ ಹೊಂದಿರುವುದಾಗಿ ತಿಳಿಸಲಾಗಿದೆ.ಟ್ರಸ್ ಗೆ ಶೇ 69ರಷ್ಟು ಮತ ಲಭಿಸಿದರೆ, ರಿಷಿ ಅವರು ಶೇ 31ರಷ್ಟು ಮತ ಪಡೆಯಲಿದ್ದಾರೆ ಎಂದೂ ಸಮೀಕ್ಷೆ ಹೇಳಿದೆ.
ಇನ್ನು ಪ್ರಧಾನಿ ಆಯ್ಕೆಗಾಗಿ ನಡೆಯುವ ಆನ್ ಲೈನ್ ಮತದಾನದ ವೇಳೆ ಮತಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು ಕೆಲದಿನಗಳ ಮಟ್ಟಿಗೆ ಆನ್ ಲೈನ್ ಮತದಾನವನ್ನು ಮುಂದೂಡಲಾಗಿದೆ.
PublicNext
04/08/2022 09:52 am