ಬ್ರಿಟನ್:ಇನ್ಫೋಸಿಸ್ ಸುಧಾಮೂರ್ತಿ ಅಳಿಯ ರಿಷಿ ಸುನಾಕ್ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸಿದ್ದು, ಪ್ರಧಾನಿ ಸ್ಥಾನಕ್ಕೆ ಏರಲು ಬಹುತೇಕ ಸನಿಹಕ್ಕೆ ಬಂದಿದ್ದಾರೆ.
ರಿಷಿ ಸುನಾಕ್ ನಾಲ್ಕು ಸುತ್ತಿನಲ್ಲೂ ಭಾರೀ ಮುನ್ನಡೆ ಸಾಧಿಸಿದ್ದಾರೆ. ಈ ಮೂಲಕ ಬ್ರಿಟಿಷ್ ನಾಡಿನ ಚುಕ್ಕಾಣಿ ಹಿಡಿಯಲು ರಿಷಿ ಸುನಾಕ್ ದಾಪುಗಾಲಿಟ್ಟಿದ್ದಾರೆ.
ಭಾರತ ಮೂಲದ ರಿಷಿ ಸುನಾಕ್ ಐದನೇ ಸುತ್ತಿನಲ್ಲೂ 137 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಇನ್ನು ಕೊನೆ ಹಂತದ ಚುನಾವಣೆಯಲ್ಲಿ ರಿಷಿ ಸುನಾಕ್ ಎದುರು ಲಿಜ್ ಟ್ರಸ್ ಮಾತ್ರ ಇದ್ದು, ಈ ಸುತ್ತಿನಲ್ಲೂ ಸುನಾಕ್ ಗೆದ್ದು ಬ್ರಿಟನ್ ಪ್ರಧಾನಿ ಆಗೋ ಭರವಸೆ ಕೂಡ ಇದೆ.
PublicNext
20/07/2022 09:43 pm