ನವದೆಹಲಿ: ಪಾಕಿಸ್ತಾನದ ಪತ್ರಕರ್ತೆ ನುಸ್ರತ್ ಮಿರ್ಜಾ ಅವರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದಿದ್ದ ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಈಗಲೂ ಆ ಹೇಳಿಕೆಗೆ ಬದ್ಧ ಎಂದಿದ್ದರು.
ತಾವು ಯುಪಿಎ ಸರ್ಕಾರದ ಅವಧಿಯಲ್ಲಿ ಐದು ಬಾರಿ ಭಾರತಕ್ಕೆ ಭೇಟಿ ನೀಡಿದ್ದು, ಇಲ್ಲಿ ಸಂಗ್ರಹಿಸಿದ ಸೂಕ್ಷ್ಮ ಮಾಹಿತಿಗಳನ್ನು ತಮ್ಮ ದೇಶದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಹಂಚಿಕೊಂಡಿರುವುದಾಗಿ ಪಾಕಿಸ್ತಾನದ ಪತ್ರಕರ್ತ ನುಸ್ರತ್ ಮಿರ್ಜಾ ಹೇಳಿಕೆ ನೀಡಿದ್ದರು. ತಾವು ಅನ್ಸಾರಿ ಅವರ ಆಹ್ವಾನಗಳ ಮೇರೆಗೆ ಭಾರತಕ್ಕೆ ಬಂದಿದ್ದಾಗಿ ಮತ್ತು ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದರು ಎನ್ನಲಾಗಿದೆ.
ಆದರೆ ಈ ಆರೋಪಗಳು ಸುಳ್ಳಿನ ಕಂತೆ ಎಂದು ಅನ್ಸಾರಿ ನಿರಾಕರಿಸಿದ್ದಾರೆ. ಆದರೆ ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಭಯೋತ್ಪಾದನೆ ಕುರಿತು 2009ರಲ್ಲಿ ನಡೆದ ಸಮ್ಮೇಳನದಲ್ಲಿ ಹಮೀದ್ ಅನ್ಸಾರಿ ಮತ್ತು ನುಸ್ರತ್ ಮಿರ್ಜಾ ಅವರು ವೇದಿಕೆ ಹಂಚಿಕೊಂಡಿದ್ದ ಚಿತ್ರವನ್ನು ಬಹಿರಂಗಪಡಿಸಿದೆ.
PublicNext
16/07/2022 04:03 pm