ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಕೆ ಪ್ರಧಾನಿ ಚುನಾವಣೆ: 2ನೇ ಸುತ್ತಿನಲ್ಲೂ ರಿಷಿ ಸುನಕ್‌ಗೆ ಮುನ್ನಡೆ

ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್ ಪ್ರಧಾನಿ ಆಕಾಂಕ್ಷಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗುರುವಾರ ನಡೆದ ನಡೆದ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅವರು ಹೆಚ್ಚು ಮತಗಳನ್ನು ಗಳಿಸಿದ್ದಾರೆ.

ಒಬ್ಬ ಅಭ್ಯರ್ಥಿ ಚುನಾವಣಾ ಸುತ್ತಿನಿಂದ ಹೊರ ಬಿದ್ದಿದ್ದಾರೆ. ಸುನಕ್ 101 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜೂನಿಯರ್ ಟ್ರೇಡ್ ಮಿನಿಸ್ಟರ್ ಪೆನ್ನಿ ಮೊರ್ಡಾಂಟ್ 83 ಮತಗಳನ್ನು ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದಿದ್ದಾರೆ. ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ 27 ಮತಗಳೊಂದಿಗೆ ಸುತ್ತಿನಿಂದ ಔಟ್ ಆಗಿದ್ದಾರೆ. ಶಾಸಕ ಟಾಮ್ ತುಗೆಂಧತ್ 32 ಮತಗಳನ್ನು ಪಡೆದರೆ, ಕೆಮಿ ಬಡೆನೋಚ್ 49 ಮತಗಳನ್ನು ಪಡೆದರು.

Edited By : Vijay Kumar
PublicNext

PublicNext

14/07/2022 10:51 pm

Cinque Terre

36.84 K

Cinque Terre

2

ಸಂಬಂಧಿತ ಸುದ್ದಿ