ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸೆ ದೇಶದಿಂದಲೇ ಇಂದು ಮುಂಜಾನೆ ಹೋಗಿದ್ದಾರೆ. ಪತ್ನಿ ಮತ್ತು ಇಬ್ಬರು ಅಂಗರಕ್ಷರ ಜೊತೆಗೆ ಮಾಲ್ಡೀವ್ಸ್‌ಗೆ ಪರಾರಿ ಆಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಗೋಟಬಯ ರಾಜಪಕ್ಸೆ ದೇಶ ತೊರೆದು ಹೋಗಿರೋದನ್ನ ಸರ್ಕಾರದ ಮೂಲಗಳು ಖಚಿಪಡಿಸಿದ್ದು, ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ರಾಜೀನಾಮೆ ಆಗ್ರಹಿಸಿ ಪ್ರತಿಭಟನಾಕಾರರು ಗೋಟಬಯ ಮನೆಗೇನೆ ನುಗ್ಗಿದ್ದರು. ಪ್ರತಿಭಟನೆಗೆ ಮಣಿದ ಗೋಟಬಯ ರಾಜಪಕ್ಸೆ ಜುಲೈ-13 ರಂದು ರಾಜೀನಾಮೆ ಕೊಡ್ತಾರೆ ಎಂದು ಸ್ಪೀಕರ್ ಮಹಿಂದಾ ಅಬೆಬರ್ಧನ್ ತಿಳಿಸಿದ್ದಾರೆ.
PublicNext
13/07/2022 10:07 am