ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

48 ಗಂಟೆಗಳಲ್ಲಿ ಬ್ರಿಟನ್ ಪ್ರಧಾನಿ ಜಾನ್ಸನ್ ಸರ್ಕಾರ ತೊರೆದ 50ಕ್ಕೂ ಹೆಚ್ಚು ಸದಸ್ಯರು

ಲಂಡನ್‌: ಬ್ರಿಟನ್‌ ಸರ್ಕಾರದಲ್ಲಿನ ಸಚಿವರು ಒಬ್ಬರಿಂದೊಬ್ಬರು ರಾಜೀನಾಮೆ ನೀಡಿ ಹೊರ ನಡೆಯುತ್ತಿದ್ದಂತೆ, ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಸ್ಥಾನಕ್ಕೆ ಕಂಟಕ ಎದುರಾಗಿದೆ. ಆಡಳಿತಾರೂಢ ಕನ್ಸರ್ವೆಟಿವ್ ಪಾರ್ಟಿಯ ಸಂಸದರಿಂದ ಬೋರಿಸ್‌ ತೀವ್ರ ಟೀಕೆಗೆ ಒಳಗಾಗಿದ್ದು, ಪ್ರಧಾನಿ ಹುದ್ದೆ ತೊರೆಯುವಂತೆ ಆಗ್ರಹ ವ್ಯಕ್ತವಾಗಿದೆ.

48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಸರ್ಕಾರದ ಭಾಗವಾಗಿರುವವರ ಪೈಕಿ 50ಕ್ಕೂ ಹೆಚ್ಚು ಸಂಸತ್ ಸದಸ್ಯರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸರ್ಕಾರವನ್ನು ತೊರೆದಿದ್ದಾರೆ. ಈ ನಡುವೆ ಮುಂದಿನ ಪ್ರಧಾನಿಯ ಆಯ್ಕೆಯ ಬಗೆಗೂ ಚರ್ಚೆ ಜೋರಾಗಿದೆ.

ಸಂಸದರಾಗಿದ್ದ ಕ್ರಿಸ್ ಪಿಂಚರ್‌ ಅವರ ವಿರುದ್ಧ ಲೈಂಗಿಕ ದುರ್ನಡೆತೆಯ ಆರೋಪಗಳಿದ್ದರೂ ಅವರಿಗೆ ಉನ್ನತ ಸ್ಥಾನ ನೀಡಿದ್ದರ ಬಗ್ಗೆ ಬೋರಿಸ್‌ ಮುಖಭಂಗ ಅನುಭವಿಸಿದ್ದಾರೆ. 2019ರಲ್ಲಿ ಪಿಂಚರ್‌ ವಿರುದ್ಧ ಆರೋಪ ಕೇಳಿಬಂದಿತ್ತು.

Edited By : Vijay Kumar
PublicNext

PublicNext

07/07/2022 02:04 pm

Cinque Terre

34.43 K

Cinque Terre

0

ಸಂಬಂಧಿತ ಸುದ್ದಿ