ವಾಷಿಂಗ್ಟನ್: ಭಾರತಕ್ಕೆ ಪ್ರಬಲ ವಿರೋಧ ಪಕ್ಷದ ಅಗತ್ಯತೆ ಇದೆ. ಆ ಪಕ್ಷವು ರಚನಾತ್ಮಕವಾಗಿರಬೇಕು ಎಂದು ಧಾರ್ಮಿಕ ಚಿಂತಕ ಹಾಗೂ ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿ ಶಂಕರ್ ಗುರೂಜಿ ಹೇಳಿದ್ದಾರೆ.
ಭಾರತಕ್ಕೆ ಬಲವಾದ, ರಚನಾತ್ಮಕ ವಿರೋಧ ಪಕ್ಷದ ಅಗತ್ಯವಿದೆ. ಈಗಿರುವ ವಿರೋಧ ಪಕ್ಷವು ತುಂಬಾ ದುರ್ಬಲವಾಗಿದೆ. ವಿರೋಧ ಪಕ್ಷದಲ್ಲಿ ನಾಯಕತ್ವದ ಕೊರತೆಯು ಪ್ರಜಾಪ್ರಭುತ್ವವಲ್ಲ ಎಂದು ತೋರುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥಾಪಕ ರವಿಶಂಕರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಸಂಪ್ರದಾಯವಾದಿ, ಸೃಜನಶೀಲ ವಿರೋಧ ಪಕ್ಷ ಭಾರತದಲ್ಲಿ ಕಾಣೆಯಾಗಿದೆ. ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯು ಮುಕ್ತ ಮತ್ತು ನ್ಯಾಯಯುತ ಚುನಾವಣೆಯೊಂದಿಗೆ ನಡೆದಿದೆ. ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಪ್ರಬಲವಾಗಿದೆ. ಆದರೆ ಕೇಂದ್ರ ಸರ್ಕಾರದಲ್ಲಿ ಪ್ರತಿಪಕ್ಷದ ಕೊರತೆ, ಬಲಿಷ್ಠ ನಾಯಕನ ಕೊರತೆಯು ದೇಶವನ್ನು ನಿರಂಕುಶ ಪ್ರಭುತ್ವವೆಂದು ತೋರುತ್ತದೆ, ಆದರೆ ಅದು ಹಾಗಾಗಬಾರದು, ನಮ್ಮದು ಪ್ರಜಾಪ್ರಭುತ್ವ ದೇಶ ಇಲ್ಲಿ ಜನರಿಗೆ ಅಧಿಕಾರವಿದೆ ಎಂದು ರವಿಶಂಕರ ಗುರೂಜಿ ಹೇಳಿದ್ದಾರೆ.
PublicNext
12/05/2022 09:33 pm