ಬರ್ಲಿನ್ : ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಮೊದಲ ಯುರೋಪ್ ಪ್ರವಾಸದಲ್ಲಿದ್ದಾರೆ. ಇಂದು ಸೋಮವಾರ ತಮ್ಮ ಯುರೋಪ್ ದೇಶಗಳ ಪ್ರವಾಸದಲ್ಲಿ ಮೊದಲಿಗೆ ಜರ್ಮನಿಯ ಬರ್ಲಿನ್ ಗೆ ಬಂದು ತಲುಪಿದ್ದಾರೆ.ಅಲ್ಲಿನ ಅನಿವಾಸಿ ಭಾರತೀಯರು ಪ್ರಧಾನಿ ಮೋದಿಯವರನ್ನು ಅಭೂತಪೂರ್ವವಾಗಿ ಸ್ವಾಗತಿಸಿದ್ದಾರೆ.
ಬರ್ಲಿನ್ ತಲುಪಿದ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಂದು, ನಾನು ಚಾನ್ಸೆಲರ್ Olaf Scholz ಅವರೊಂದಿಗೆ ಉದ್ಯಮಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತೇನೆ. ಈ ಭೇಟಿಯು ಭಾರತ ಮತ್ತು ಜರ್ಮನಿ ನಡುವಿನ ಸ್ನೇಹವನ್ನು ಹೆಚ್ಚಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮೋದಿ ಮತ್ತು ಓಲಾಫ್ ಅವರು 6 ನೇ ಭಾರತ-ಜರ್ಮನಿ ಅಂತರ-ಸರ್ಕಾರಿ ಸಮಾಲೋಚನೆಯಲ್ಲಿ ಭಾಗವಹಿಸಲಿದ್ದಾರೆ. 2021 ರಲ್ಲಿ, ಭಾರತ ಮತ್ತು ಜರ್ಮನಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳ ಸ್ಮರಣಾರ್ಥವಾಗಿ ಮತ್ತು 2000ರಿಂದ ಜರ್ಮನಿ ಕಾರ್ಯತಂತ್ರದ ಪಾಲುದಾರವಾಗಿದೆ ಎಂದು ಮೋದಿ ಹೇಳಿದ್ದಾರೆ.
ಉಭಯ ನಾಯಕರು ಉನ್ನತ ಮಟ್ಟದ ದುಂಡುಮೇಜಿನ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಎರಡೂ ದೇಶಗಳ ಉನ್ನತ ಸಿಇಒಗಳೊಂದಿಗೆ ಸಂವಾದ ನಡೆಸಲಿದ್ದಾರೆ.ಓರ್ವ ಬಾಲಕಿ ತಾನು ಬಿಡಿಸಿದ ಮೋದಿಯವರ ಚಿತ್ರವನ್ನು ಪ್ರಧಾನಿಯವರಿಗೆ ನೀಡುತ್ತಲೇ ಖುಷಿಪಟ್ಟ ಪ್ರಧಾನಿ ಅದರಲ್ಲಿ ಸಹಿ ಹಾಕಿದ್ದಾರೆ. ಇನ್ನೊಬ್ಬ ಬಾಲಕ ದೇಶಭಕ್ತಿಗೀತೆ ಹಾಡಿ ಪ್ರಧಾನಿ ಮನಗೆದ್ದಿದ್ದಾನೆ.
PublicNext
02/05/2022 05:36 pm