ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌದಿಯಲ್ಲಿ ಪಾಕ್‌ ಪ್ರಧಾನಿ ಶಹಬಾಜ್ ಷರೀಫ್‌ಗೆ ಭಾರಿ ಅವಮಾನ

ದುಬೈ: ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿ ಶಹಬಾಜ್ ಷರೀಫ್ ಇತ್ತೀಚೆಗೆ ತಮ್ಮ ಸಚಿವ ಸಂಪುಟದೊಂದಿಗೆ ಸೌದಿ ಅರೇಬಿಯಾದ ಮದಿನಾದಲ್ಲಿರುವ ಮಸ್ಜಿದ್‌-ಇ-ನಬಾವಿಗೆ ತೆರಳಿದ್ದರು. ಈ ವೇಳೆ ಅಲ್ಲಿನ ಪಾಕ್‌ ಮೂಲದ ಜನರು ಶಹಬಾಜ್ ಷರೀಫ್ ಅವರಿಗೆ ಅವಮಾನ ಮಾಡಿದ್ದಾರೆ.

ಶೆಹಬಾಜ್ ನಡೆದುಬರುತ್ತಿದ್ದರೆ, ಜನರು ಅವರಿಗೆ 'ಕಳ್ಳ, ಕಳ್ಳ, ಪಾಕಿಸ್ತಾನಿ ವಿರೋಧಿ' (ಚೋರ್ ಚೋರ್) ಎಂದು ಕೂಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿಂದಿನ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ಶೆಹಬಾಜ್ ಅವರನ್ನು ಇದೇ ರೀತಿ ದೂರಿದ್ದರು.

Edited By : Vijay Kumar
PublicNext

PublicNext

30/04/2022 08:51 am

Cinque Terre

92.77 K

Cinque Terre

17

ಸಂಬಂಧಿತ ಸುದ್ದಿ