ನವದೆಹಲಿ: ಪಾಕಿಸ್ತಾನದಲ್ಲಿ ನಡೆದ ಸಾಕಷ್ಟು ರಾಜಕೀಯ ಹೈಡ್ರಾಮದ ಬಳಿಕದ ಇದೀಗ 23 ನೇ ಪ್ರಧಾನಿಯಾಗಿ ಶಹಬಾಜ್ ಷರೀಫ್ ಆಯ್ಕೆಯಾಗಿದ್ದಾರೆ. ವಿರೋಧ ಪಕ್ಷದ ನಾಯಕ ಶಹಬಾಜ್ ಷರೀಫ್ ಇಂದು ಪಾಕಿಸ್ತಾನದ ನೂತನ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ.
ಈಗಾಗಲೇ ಶಹಬಾಜ್ ಷರೀಫ್ ಅವರು ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪಿಪಿಪಿ (PPP) ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಭೇಟಿಯಾಗಿ ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ.ಇಂದು ಮಧ್ಯಾಹ್ನ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನ ನಡೆಯುವ ಮೂಲಕ ಶಹಬಾಜ್ ಷರೀಫ್ ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಇಂದು ರಾತ್ರಿ 8ಕ್ಕೆ ಪ್ರಧಾನಿಯಾಗಿ ಶಹಬಾಜ್ ಷರೀಫ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯ ಮ್ಯಾಜಿಕ್ ನಂಬರ್ 172 ಆಗಿದ್ದು 174 ಸಂಸದರ ಬೆಂಬಲ ಹೊಂದಿರುವ ಶಹಬಾಜ್ ಷರೀಫ್ ಸುಲಭವಾಗಿ ಪ್ರಧಾನ ಮಂತ್ರಿ ಆಗಿದ್ದಾರೆ.ಕಿಸ್ತಾನ ಮುಸ್ಲಿಂ ಲೀಗ್ ಅಧ್ಯಕ್ಷ ಹಾಗೂ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಸಹೋದರರಾಗಿರುವ ಶಹಬಾಜ್ ಷರೀಫ್ ಪಾಕ್ ನ 23 ನೇ ಪ್ರಧಾನಿಯಾಗಿದ್ದಾರೆ.
PublicNext
11/04/2022 05:22 pm