ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟ ಇಮ್ರಾನ್ ಖಾನ್!

ಇಸ್ಲಾಮಾಬಾದ್ : ದೇಶದಲ್ಲಿ ಉತ್ತಮ ಆಡಳಿತ ನಡೆಸಬೇಕಿರುವ ಪಾಕ್ ಪ್ರಧಾನಿ ದೇಶವ್ಯಾಪಿ ಪ್ರತಿಭಟನೆ ಮಾಡುವಂತೆ ಕರೆ ಕೊಟ್ಟಿದ್ದಾರೆ.

ಹೌದು ತಮ್ಮ ರಾಜಕೀಯ ಭವಿಷ್ಯ ಅತಂತ್ರಕ್ಕೀಡಾಗಿ ಇಕ್ಕಟ್ಟು ಹಾಗೂ ಮುಜುಗರದ ಪರಿಸ್ಥಿತಿ ನಿರ್ಮಾಣವಾಗಿದೆ ಇದರಿಂದ ಕಂಗೆಟ್ಟ ಪ್ರಧಾನಿ ಈ ರೀತಿ ಕರೆ ಕೊಟ್ಟಿದ್ದಾರೆ.

ಅವಿಶ್ವಾನ ನಿರ್ಣಯವನ್ನು ಎದುರಿಸುತ್ತಿರುವ ಪ್ರಧಾನಮಂತ್ರಿ ಇಮ್ರಾನ್ ಖಾನ್ ಶನಿವಾರ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಅವಿಶ್ವಾಸ ಮಂಡನೆ ಮಾಡಿದ ವಿರೋಧಿಗಳನ್ನು ದೇಶದ್ರೋಹಿ ಎಂದು ಕರೆದರು.

ಅಷ್ಟೇ ಅಲ್ಲ, ಅಂಥವರ ವಿರುದ್ಧ ದೇಶದ ಇಂದು ಮತ್ತು ನಾಳೆ ಬೀದಿಗಿಳಿದು ಪ್ರತಿಭಟನೆ ಮಾಡುವ ಮೂಲಕ ಅವಿಶ್ವಾಸ ನಿರ್ಣಯವನ್ನು ವಿರೋಧಿಸಬೇಕು ಎಂದರು. ಬೇರೆ ದೇಶಗಳಲ್ಲಿ ಇಂಥದ್ದು ನಡೆದಿದ್ದರೆ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರು. ಇಲ್ಲಿ ನಾನೇ ನಿಮಗೆ ಇಂದು-ನಾಳೆ ಬೀದಿಗಿಳಿದು ಪ್ರತಿಭಟನೆ ಮಾಡುವಂತೆ ಕರೆ ನೀಡುತ್ತಿದ್ದೇನೆ ಎಂದರು.

Edited By : Nirmala Aralikatti
PublicNext

PublicNext

03/04/2022 09:13 am

Cinque Terre

34.78 K

Cinque Terre

5

ಸಂಬಂಧಿತ ಸುದ್ದಿ