ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧಿಕಾರ ಉಳಿಸಕೊಳ್ಳಲು ವಾಮಾಚಾರದ ಮೊರೆ ಹೊದ್ರಾ ಪಾಕ್​ ಪ್ರಧಾನಿ?

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಡಳಿತಾರೂಢ ಮೈತ್ರಿಕೂಟವನ್ನು ಇಬ್ಬರು ಶಾಸಕರು ಮಂಗಳವಾರ ತೊರೆದಿದ್ದಾರೆ. ಒಂದೆಡೆ ಇಮ್ರಾನ್‌ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಮತದಾನಕ್ಕೆ ಏಪ್ರಿಲ್ 3ಕ್ಕೆ ದಿನಾಂಕ ನಿಗದಿಯಾಗಿದೆ. ಇತ್ತ ತಮ್ಮ ಸರ್ಕಾರವನ್ನ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಹತಾಶರಾಗಿರುವ ಇಮ್ರಾನ್ ಖಾನ್‌ ವಾಮಾಚಾರದ ಮೊರೆ ಹೋಗಿದ್ದಾರೆ ಎಂದು ವಿಪಕ್ಷಗಳು ಕುಟುಕಿವೆ.

"ಬಡವರು ಹಸಿವಿನಿಂದ ಬಳಲುತ್ತಿದ್ದಾರೆ, ಅವರಿಗೆ ಆಹಾರ ಸಿಗುತ್ತಿಲ್ಲ. ಇಲ್ಲಿ ಬಾನಿ ಗಾಲಾದಲ್ಲಿ ಟನ್‌ಗಟ್ಟಲೆ ಮಾಂಸವನ್ನು ಸುಡಲಾಗುತ್ತಿದೆ. ನಾನು ಇದನ್ನು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ" ಎಂದು ಪಿಎಂಎಲ್-ಎನ್ ನಾಯಕ ಆರೋಪಿಸಿದ್ದಾರೆ.

ಪ್ರಧಾನಿ ನಿವಾಸದಲ್ಲಿ ವಾಮಾಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದು ವಿರೋಧ ಪಕ್ಷದ ನಾಯಕ ಶರೀಫ್ ಮಾತ್ರವಲ್ಲ. ಅವರ ಸೋದರ ಸೊಸೆ ಮರ್ಯಮ್ ನವಾಜ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.

Edited By : Vijay Kumar
PublicNext

PublicNext

30/03/2022 09:00 am

Cinque Terre

39.4 K

Cinque Terre

2

ಸಂಬಂಧಿತ ಸುದ್ದಿ