ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್​ಗೆ ಇಂದು ಅಗ್ನಿ ಪರೀಕ್ಷೆ

ಇಸ್ಲಾಮಾಬಾದ್: ಇಸ್ಲಾಮಾಬಾದ್‌: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ತಮ್ಮ ಸರಕಾರವನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದು, ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯದ ಮೂಲಕ ಇಮ್ರಾನ್‌ರನ್ನು ಪ್ರಧಾನಿ ಸ್ಥಾನದಿಂದ ಕಿತ್ತೊಗೆಯಲು ಮುಂದಾಗಿವೆ.

ಪಾಕಿಸ್ತಾನದ ಪ್ರಧಾನಿ ವಿರುದ್ಧದ ಅವಿಶ್ವಾಸಾರ್ಹ ನಿರ್ಣಯದ ಪ್ರಕ್ರಿಯೆ ಪಾಕಿಸ್ತಾನದ ಸಂಸತ್ತಿನಲ್ಲಿ ಇಂದಿನಿಂದ ಆರಂಭವಾಗಿಲಿದೆ. ಇಮ್ರಾನ್‌ ಖಾನ್ ತಮ್ಮ ಸ್ಥಾನ ಉಳಿಸಿಕೊಳ್ಳಬೇಕಾದರೆ ಸಂಸತ್‌ನಲ್ಲಿ ಕನಿಷ್ಠ 172 ಸ್ಥಾನ ಮತ ಗಳಿಸಬೇಕಾಗುತ್ತದೆ. ವಿರೋಧ ಪಕ್ಷಗಳ ಒಟ್ಟು ಬಲ 163ರಷ್ಟಿದ್ದು, ಇಮ್ರಾನ್‌ ಪಕ್ಷದ ಬಂಡಾಯಗಾರರು ವಿರೋಧ ಪಕ್ಷಗಳ ಕೈಜೋಡಿಸಿದರೆ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಿದೆ.

2023ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬೇಕಿದ್ದು, ಸದ್ಯ ಉದ್ಭವಿಸಿರುವ ಸಂಘರ್ಷವನ್ನು ನಿಭಾಯಿಸುವ ಸಲುವಾಗಿ ಅವಧಿಗೆ ಮೊದಲೇ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ.

Edited By : Vijay Kumar
PublicNext

PublicNext

25/03/2022 09:01 am

Cinque Terre

38.78 K

Cinque Terre

0