ನವದೆಹಲಿ: ಉತ್ತರ ಪ್ರದೇಶದ ಭಾರತೀಯ ವಿದ್ಯಾರ್ಥಿನಿ ಗರಿಮಾ ಮಿಶ್ರಾ ಅವರು ಉಕ್ರೇನ್‌ನಲ್ಲಿ ಸಿಲುಕಿ ಆತಂಕ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಗರಿಯಾ ಬಿಕ್ಕಿ ಬಿಕ್ಕಿ ಅಳುತ್ತಾ ಸಹಾಯ ಕೇಳುತ್ತಿರುವ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೋಶಿಯಲ್ ಟ್ವೀಟ್ ಮಾಡಿದ್ದಾರೆ. ಜೊತೆಗೆ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
'ದಯವಿಟ್ಟು ಭಾರತೀಯ ಮಕ್ಕಳನ್ನು ಏನಾದರೂ ಮಾಡಿ ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕು. ನಮ್ಮ ಇಡೀ ದೇಶವು ಉಕ್ರೇನ್‌ನಲ್ಲಿ ಇರುವ ಮಕ್ಕಳು ಮತ್ತು ಕುಟುಂಬದವರ ಜೊತೆಗೆ ಇದ್ದೇವೆ. ಈ ವಿಡಿಯೋದಲ್ಲಿರುವ ಭಾರತೀಯ ವಿದ್ಯಾರ್ಥಿನಿ ಬಹಳ ಆತಂಕಗೊಂಡಿರುವುದು ಕಾಣಿಸುತ್ತಿದ್ದಾಳೆ' ಎಂದು ಪ್ರಿಯಾಂಕಾ ಗಾಂಧಿ ಬರೆದು ಟ್ವೀಟ್ ಮಾಡಿದ್ದಾರೆ.
PublicNext
28/02/2022 06:44 pm