ಮಾಸ್ಕೋ:ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡುತ್ತಿದೆ. ಉಕ್ರೇನ್ ಹೊತ್ತಿ ಉರಿಯುತ್ತಿದೆ. ಈ ವೇಳೆ ರಷ್ಯಾ ದೇಶಕ್ಕೆ ಬಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್ What a time I have come, so much excitement ಅಂತಲೇ ಸಾಮಾಜಿಕ ತಾಣದಲ್ಲಿ ಕೆಂಗಣ್ಣಿಗೆ ಗುರಿ ಆಗಿದ್ದಾರೆ.
ಮಾಸ್ಕೋಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಇಮ್ರಾನ್ ಖಾನ್‌ರನ್ನ ಸ್ವಾಗತಿಸಲಾಗಿದೆ. ಇದೆ ವೇಳೆಯಲ್ಲಿಯೇ ಇಮ್ರಾನ್ What a time I have come, so much excitement ಅಂತಲೇ ಹೇಳಿದ್ದಾರೆ. ಈ ಮಾತು ಎದುರಿಗೆ ಇದ್ದ ಕ್ಯಾಮೆರಾದಲ್ಲಿ ಕ್ಯಾಪ್ಚರ್ ಆಗಿದೆ.
ಅಂದ್ಹಾಗೆ ಇಮ್ರಾನ್ ಖಾನ್, ರಷ್ಯಾ ಜೊತೆಗೆ ದ್ವೀಪಕ್ಷಿಯ ಸಂಬಂಧ ಬಲಪಡಿಸಲು ಹಾಗೂ ಇಂಧನ ವಲಯದಲ್ಲಿ ಸಹಕಾರ ಕೇಳುವ ವಿಚಾರಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗೆ ಮಾತುಕತೆ ನಡೆಸಲು ಆಗಮಿಸಿದ್ದಾರೆ.
PublicNext
24/02/2022 10:19 pm