ಕೆನಡಾ: ಇಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿಗೆ ತರಲಾಗಿದೆ. ಇದನ್ನ ಇಲ್ಲಿಯ ಜನ ವಿರೋಧಿಸುತ್ತಿದ್ದಾರೆ. ಪ್ರತಿಭಟನೆನೂ ಮಾಡುತ್ತಿದ್ದಾರೆ. ಇದಕ್ಕೆ ಹೆದರಿ ಪ್ರಧಾನಿ ಜಸ್ಟಿನ್ ಟ್ರುಡ್ಯು ಕುಟುಂಬ ಸಮೇತ ಅಜ್ಞಾತ ಸ್ಥಳಕ್ಕೆ ಓಡಿ ಹೋಗಿದ್ದಾರೆ ಅನ್ನೋ ಸುದ್ದಿ ಇದೆ.
ಭಾರತ ರೈತರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟಿಸಿದ್ದನ್ನ ಒಪ್ಪಿಕೊಂಡು ಬೆಂಬಲಿಸಿದ್ದರು. ಶಾಂತಿಯುತವಾಗಿಯೇ ಪ್ರತಿಭಟಿಸುವ ಹಕ್ಕು ಅವರಿಗಿದೆ ಅಂತಲೇ ಹೇಳಿದ್ದರು. ಆದರೆ ಈಗೀನ ತಮ್ಮ ದೇಶದ ಸಣ್ಣ ಒಂದು ಹೋರಾಟಕ್ಕೇನೆ ಓಡಿ ಹೋಗಿದ್ದಾರೆ ಅನ್ನೋ ಟೀಕೆ ಕೇಳಿ ಬರುತ್ತಿವೆ.
ಖಲಿಸ್ತಾನಿ ಪರ ಕೆನಡಾ ಸಂಸದ ಜಗ್ಮೀಟ್ ಸಿಂಗ್ ಧಲಿವಾಲ್ ಬಾಮೈದ್ ಈಗ ಬಹುಮಾನ ಘೋಷಿಸಿದ್ದಾರೆ. ಕೆನಡಾ ಸರ್ಕಾರದ ವಿರುದ್ಧದ ಈ ಹೋರಾಟಕ್ಕೆ 9.72 ಲಕ್ಷ ನೀಡುವುದಾಗಿ ಈಗಾಗಲೇ ಹೇಳಿ ಬಿಟ್ಟಿದ್ದಾರೆ.
PublicNext
03/02/2022 10:42 pm