ನವದೆಹಲಿ: ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರ (PoK)ಯನ್ನು ಹಿಂಪಡೆಯುವುದೇ ಕೇಂದ್ರ ಸರ್ಕಾರದ ಮುಂದಿನ ಅಜೆಂಡಾ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಮೀರಪುರ್ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪಾಕ್ ಆಕ್ರಮಿತ ಕಾಶ್ಮೀರ ಹಿಂಪಡೆಯುವ ಅವಶ್ಯಕತೆ ಇದೆ. ಕಾರಣ ನಮ್ಮ ಸಹೋದರರು PoKಯಲ್ಲಿ ಅಮಾನವೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ವಸತಿ, ಆಹಾರ, ಶಿಕ್ಷಣ, ಆಸ್ಪತ್ರೆ ಸೌಲಭ್ಯಗಳಿಲ್ಲದೆ ನರಳಾಡುತ್ತಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ನಿರಾಕರಿಸಲಾಗಿದೆ. ಭಯೋತ್ಪಾದಕರು, ಪಾಕಿಸ್ತಾನ ಸೇನೆ, ಪಾಕಿಸ್ತಾನ ಸರ್ಕಾರದ ಕ್ರೂರ ಆಡಳಿತಕ್ಕೆ ನಲುಗಿ ಹೋಗಿದ್ದಾರೆ. ಅವರ ಬದುಕು ಹಸನಾಗಿಸಬೇಕಿದೆ. ಅವರಿಗೆ ಎಲ್ಲಾ ಸೌಲಭ್ಯಗಳು ಸಿಗಬೇಕಿದೆ" ಎಂದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ತೆಗೆಯಲು ಸಾಧ್ಯವೇ ಇಲ್ಲ. ಸಂವಿಧಾನ, ಕಾನೂನು ಅನುಮತಿಸುವಿದಿಲ್ಲ. ಈಗೇನಿದ್ದರೂ ಅನುಭವಿಸಲೇಬೇಕು ಅನ್ನೋ ಮಾತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ತೋರಿದ ಧೈರ್ಯ ಸ್ವತಂತ್ರ ಭಾರತದಲ್ಲಿ ಯಾವ ಪ್ರಧಾನಿ ಹಾಗೂ ಸರ್ಕಾರ ತೋರಿಲ್ಲ. ಅಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದ್ದಾರೆ. ಅಸಾಧ್ಯ ಎಂಬುದು ಸಾಧ್ಯವಾಗಿದ್ದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಕೂಡ ಭಾರತದ ಭಾಗ ಆಗಲಿದೆ. ಅನುಮಾನ ಬೇಡ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
PublicNext
22/11/2021 02:13 pm